ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಮನೆ ಮೇಲೆ ಬಿದ್ದ ಮರ

Published 27 ಜುಲೈ 2023, 12:58 IST
Last Updated 27 ಜುಲೈ 2023, 12:58 IST
ಅಕ್ಷರ ಗಾತ್ರ

ನಾಪೋಕ್ಲು: ಸ್ಥಳಿಯ ಗ್ರಾಮದ ಕೂರುಳಿ ಸಮೀಪ ವಾಸವಾಗಿರುವ ಕೂಲಿ ಕಾರ್ಮಿಕ ಭೀಮಯ್ಯ ಎಂಬವರ ಮನೆಯ ಮೇಲೆ ಭಾರಿ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಗಾಳಿ ಮಳೆಗೆ ಗುರುವಾರ ನಸುಕಿನಲ್ಲಿ ಮನೆಯ ಸಮೀಪವಿರುವ ಕೊಂಬಂಡ ಗೀತಾ ಎಂಬವರ ಕಾಫಿ ತೋಟದಲ್ಲಿದ್ದ ಭಾರಿ ಗಾತ್ರದ ಮರ ಸೇರಿ ಮೂರು ಮರಗಳು ಬಿದ್ದು ಭೀಮಯ್ಯ ಅವರ ವಾಸದ ಮನೆ ಒಂದು ಭಾಗ, ಬಚ್ಚಲು ಮನೆ ಮತ್ತು ಕೋಳಿಗೂಡಿಗೆ ಹಾನಿಯಾಗಿದೆ. ಈ ಸಂದರ್ಭ ಭೀಮಯ್ಯ ಮತ್ತು ಪತ್ನಿ ಮಕ್ಕಳು ಮನೆಯೊಳಗಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಗಾಳಿ-ಮಳೆಯಿಂದ ಎಡಪಾಲ ಗ್ರಾಮದಲ್ಲೂ ಹಾನಿ ಸಂಭವಿಸಿದೆ. ಗ್ರಾಮದ ಜುನೈದ್ ಅವರ ಮನೆಯ ಗೋಡೆಗಳು ಮಳೆಯಿಂದಾಗಿ ಕುಸಿದಿವೆ.

ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರತೀಪ ಬಿ.ಎಂ, ಶಿವಚಾಳಿಯಂಡ ಜಗದೀಶ್, ಗ್ರಾಮಸ್ಥರಾದ ಪಾಡಿಯಮ್ಮoಡ ಮನು ಮಹೇಶ್ , ಕಂಗಂಡ ಜಾಲಿ ಪೂವಪ್ಪ,ಕುಂಬಂಡ ತಿಮ್ಮಯ್ಯ, ಕೊಂಬಂಡ ಧನಂಜಯ, ಪ್ರಕಾಶ್, ದರ್ಶನ್ ಇನ್ನಿತರರು ಮಳೆಯನ್ನು ಲೆಕ್ಕಿಸದೆ ಮನೆಗೆ ಬಿದ್ದ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿದರು. ನಂತರ ಚಾವಣಿಗೆ ಶೀಟ್‌ ಹೊದಿಕೆ ಅಳವಡಿಸಿ ಮಾನವೀಯತೆ ಮೆರೆದರು. ಉಪತಹಶೀಲ್ದಾರ್ ಸುನಿಲ್ ಕುಮಾರ್, ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಅಮೃತ ಭೇಟಿ ನೀಡಿ ಪರಿಶೀಲಿಸಿದರು.

ನಾಪೋಕ್ಲು ಸಮೀಪದ ಕೂರುಳಿ ಗ್ರಾಮದಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ  ಅರಮನೆ ಪಾಲೆ ಅಪ್ಪು ಅವರ ಮಗ ಭೀಮಯ್ಯ ಎಂಬವರ ಮನೆಯ ಮೇಲೆ ಮರಬಿದ್ದಿರುವುದು.
ನಾಪೋಕ್ಲು ಸಮೀಪದ ಕೂರುಳಿ ಗ್ರಾಮದಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ  ಅರಮನೆ ಪಾಲೆ ಅಪ್ಪು ಅವರ ಮಗ ಭೀಮಯ್ಯ ಎಂಬವರ ಮನೆಯ ಮೇಲೆ ಮರಬಿದ್ದಿರುವುದು.
ನಾಪೋಕ್ಲು ಸಮೀಪದ ಎಡಪಾಲ ಗ್ರಾಮದ ಜುನೈದ್ ಎಂಬುವರ ಮನೆಯ ಗೋಡೆಗಳು ಮಳೆಯಿಂದಾಗಿ ಕುಸಿದಿವೆ
ನಾಪೋಕ್ಲು ಸಮೀಪದ ಎಡಪಾಲ ಗ್ರಾಮದ ಜುನೈದ್ ಎಂಬುವರ ಮನೆಯ ಗೋಡೆಗಳು ಮಳೆಯಿಂದಾಗಿ ಕುಸಿದಿವೆ
ನಾಪೋಕ್ಲು ಗ್ರಾಮದ ಕೂರುಳಿ ಭೀಮಯ್ಯ  ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿ ಸಂದರ್ಭ ಗ್ರಾಮಸ್ಥರು ಬಿದ್ದ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ ನಂತರ ಚಾವಣಿ ಗೆ ಶೀಟ್ ಗಳ ಹೊದಿಕೆ ಅಳವಡಿಸಿ ಮಾನವೀಯತೆ ಮೆರೆದ ತಂಡ.
ನಾಪೋಕ್ಲು ಗ್ರಾಮದ ಕೂರುಳಿ ಭೀಮಯ್ಯ  ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿ ಸಂದರ್ಭ ಗ್ರಾಮಸ್ಥರು ಬಿದ್ದ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ ನಂತರ ಚಾವಣಿ ಗೆ ಶೀಟ್ ಗಳ ಹೊದಿಕೆ ಅಳವಡಿಸಿ ಮಾನವೀಯತೆ ಮೆರೆದ ತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT