ಮಡಿಕೇರಿ: ಭಾರತೀಯ ಸೇನೆಯ ಮಹಾ ದಂಡನಾಯಕರಾಗಿದ್ದ ‘ಫೀಲ್ಡ್ ಮಾರ್ಷಲ್’ ಕೆ.ಎಂ.ಕಾರ್ಯಪ್ಪ ಅವರ 120ನೇ ಜನ್ಮ ದಿನಾಚರಣೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಭಾಶಯ ಕೋರಿದ್ದಾರೆ. ಅವರ ದೇಶಸೇವೆಯನ್ನು ಸ್ಮರಿಸಿದ್ದಾರೆ.

‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರ ಜನ್ಮದಿನದ ಸ್ಮರಣೆ. ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಕೆ.ಎಂ.ಕಾರ್ಯಪ್ಪನವರು ನಮ್ಮ ಅತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು. ಅತ್ಯಂತ ನೆಚ್ಚಿನ ನಾಯಕರಾಗಿ ಉಳಿದಿರುತ್ತಾರೆ’ ಎಂದು ರಾಷ್ಟ್ರಪತಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಅದನ್ನೇ ಇಂಗ್ಲಿಷ್ ಹಾಗೂ ಕೊಡವ ಭಾಷೆಯಲ್ಲೂ ಬರೆದು ಶುಭಾಶಯ ಕೋರಿದ್ದಾರೆ.

ಮಡಿಕೇರಿಯಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೆ.ಎಂ.ಕಾರ್ಯಪ್ಪ 120ನೇ ಜನ್ಮ ದಿನಾಚರಣೆ ನಡೆಯಿತು. ಕಾರ್ಯಪ್ಪ ಅವರ ಪತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ನಿವೃತ್ತ ಮೇಜರ್ ಬಿ.ಸಿ.ನಂಜಪ್ಪ, ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.