ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಿಸಿದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ

ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ವಿಶೇಷ
Last Updated 26 ಆಗಸ್ಟ್ 2019, 13:00 IST
ಅಕ್ಷರ ಗಾತ್ರ

ಮಡಿಕೇರಿ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಗೌಳಿಬೀದಿಯ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಮಕ್ಕಳಿಗೆ ಛದ್ಮವೇಷ ಹಾಗೂ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಗಳು ನಡೆದವು.

ಹಲವು ವರ್ಷಗಳಿಂದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಆಚರಿಸಿಕೊಂಡು ಬರುತ್ತಿರುವ ದೇವಾಲಯ ಸಮಿತಿ ಈ ಬಾರಿಯೂ ಆಯೋಜಿಸಿತ್ತು. 50 ಅಡಿ ಎತ್ತರದ ಕಮಾನಿನಲ್ಲಿ ಮೊಸರು ಕುಡಿಕೆಯನ್ನು ತೂಗಿಸಿ ಒಡೆಯುವ ಸಂಪ್ರದಾಯ ನಡೆಸಲಾಗುತ್ತಿದೆ.

ಇಬ್ಬರು ಮಾತ್ರ ಮೊಸರು ಕುಡಿಕೆ ಒಡೆಯುವಲ್ಲಿ ಪಾಲ್ಗೊಳ್ಳುತ್ತಾರೆ. ಒಡೆಯುವ ಸಂದರ್ಭ ನೀರೆರಚಲಾಗುತ್ತದೆ. ಅದಕ್ಕಾಗಿ ಅವರು ಒಂದು ವಾರ ವಿಶೇಷ ವ್ರತದಲ್ಲಿರುತ್ತಾರೆ.

ಆಕರ್ಷಿಸಿದ ಕೃಷ್ಣ ವೇಷ: ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಆಯೋಜಿಸಿದ್ದ ಕೃಷ್ಣ ಸ್ಪರ್ಧೆಯಲ್ಲಿ ಹಲವು ಪುಟಾಣಿಗಳು ಪಾಲ್ಗೊಂಡು, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಿಜೇತ ಮಕ್ಕಳಿಗೆ ದೇವಾಲಯ ಸಮಿತಿಯಿಂದ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT