ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಮಾರಾಟ: ದರ ನಿಗದಿಗೆ ಒತ್ತಾಯ

Last Updated 1 ಜನವರಿ 2019, 13:51 IST
ಅಕ್ಷರ ಗಾತ್ರ

ಮಡಿಕೇರಿ: ಭೂಕುಸಿತದಿಂದ ಕಾಫಿ ತೋಟಗಳಲ್ಲಿ ಬಿದ್ದಿರುವ ಮರಗಳನ್ನು ಮಾರಾಟಕ್ಕೆ ಬೆಳೆಗಾರರು ಮುಂದಾಗಿದ್ದು, ಅದಕ್ಕೆ ಸೂಕ್ತ ಬೆಲೆ ದೊರಕದೇ ನಷ್ಟ ಉಂಟಾಗುತ್ತಿದೆ ಎಂದು ಸೋಮವಾರಪೇಟೆ ಕಾಫಿ ಬೆಳೆಗಾರರ ಸಂಘದ ವಕ್ತಾರ ಶ್ಯಾಂಪ್ರಸಾದ್‌ ಅಳಲು ತೋಡಿಕೊಂಡಿದ್ದಾರೆ.

ವ್ಯಾಪಕ ಮಳೆಯಿಂದ ತೋಟದಲ್ಲಿರುವ ಸಿಲ್ವರ್‌, ಬಳಂಜಿ ಇತರ ಜಾತಿ ಮರಗಳನ್ನು ವರ್ತಕರು, ದಲ್ಲಾಳಿಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಅದ್ದರಿಂದ ಸರ್ಕಾರವೇ ಬೆಲೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಗಾಳಿ– ಮಳೆಯಿಂದ ಬಿದ್ದ ಮರಗಳಿಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ಆರು ತಿಂಗಳಿಂದ ಮಾರಾಟಕ್ಕೆ ಅನುಮತಿ ನೀಡಿರಲಿಲ್ಲ. ಮರಗಳು ಕೊಳೆಯುತ್ತಿದ್ದವು. ಹೀಗಾಗಿ, ಕಡಿಮೆ ಬೆಲೆಗೆ ಮಾರಾಟಗಾರರು ಕೇಳುತ್ತಿದ್ದಾರೆ. ಮೊದಲೇ ಕಾಫಿ ಹಾಗೂ ಕಾಳುಮೆಣಸಿಗೆ ಬೆಲೆ ಇಲ್ಲ. ಈಗ ಬಿದ್ದ ಮರಗಳಿಗೂ ಬೆಲೆ ಸಿಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT