ಭಾನುವಾರ, ಸೆಪ್ಟೆಂಬರ್ 22, 2019
22 °C

ನೆಲ್ಯಹುದಿಕೇರಿ: ಕಾಡಾನೆ ಕಾರ್ಯಾಚರಣೆ

Published:
Updated:
Prajavani

ಸಿದ್ದಾಪುರ: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 13 ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.
ನೆಲ್ಯಹುದಕೇರಿ ಸಮೀಪದ ಅಭ್ಯತ್‍ಮಂಗಲ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಬೀಡುಬಿಟ್ಟಿದ್ದ ಮರಿ ಆನೆ ಹಾಗೂ 3 ಸಲಗ ಸೇರಿದಂತೆ ಒಟ್ಟು 13 ಕಾಡಾನೆಗಳಿರುವ ಹಿಂಡನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟಿದರು.

ಅಭ್ಯತ್‍ಮಂಗಲ ಗ್ರಾಮದ ಕಾಟಿಬಾಣೆ ತೋಟದಿಂದ ಕಾಡಾನೆ ಹಿಂಡನ್ನು ದುಬಾರೆ ಮೀಸಲು ಅರಣ್ಯಕ್ಕೆ ಓಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಆರ್.ಎಫ್.ಓ ಅರುಣ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಲಾಸ್ ಗೌಡ, ಅರಣ್ಯ ರಕ್ಷಕ ಚರಣ್, ಸಿಬ್ಬಂದಿಗಳಾದ ಧರ್ಮಪಾಲ್, ಜಗದೀಶ್, ಆಲ್ಬರ್ಟ್, ವಾಸುದೇವ, ಆರ್.ಆರ್.ಟಿ ತಂಡದ ಆಶಿಕ್, ಸುಬ್ರಮಣ್ಯ ಸೇರಿದಂತೆ ಇನ್ನಿತರರು ಇದ್ದರು.

ಇತ್ತೀಚೆಗೆ ವಾಲ್ನೂರು ಗ್ರಾಮದಲ್ಲಿ ಬೀಡುಬಿಟ್ಟ 23 ಕಾಡಾನೆಗಳನ್ನು ಅರಣ್ಯ ಇಲಾಖೆ ನದಿ ದಾಟಿಸಿ ಅರಣ್ಯಕ್ಕೆ ಅಟ್ಟಲಾಗಿತ್ತು. ಆದರೇ ಅರಣ್ಯಕ್ಕೆ ಅಟ್ಟಿದ ಕಾಡಾನೆಗಳು ಮತ್ತೆ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಕಾರ್ಮಿಕರು ಹಾಗೂ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

Post Comments (+)