ಭಾನುವಾರ, ಡಿಸೆಂಬರ್ 8, 2019
21 °C

ಕಡವೆ ಬೇಟೆ: ಓರ್ವನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿರಾಜಪೇಟೆ: ಸಮೀಪದ ತೋರ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ಕಡವೆ ಹತ್ಯೆ ಮಾಡಿದ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.

ಐವರ ತಂಡ ಕಡವೆ ಬೇಟೆಯಾಡಿ ಮಾಂಸ ಒಯ್ಯುವಾಗ ಮಾಹಿತಿ ಪಡೆದ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಬಂಧಿತನಿಂದ ಕಡವೆ ಮಾಂಸ, ಕೋವಿ ವಶಕ್ಕೆ ಪಡೆಯಲಾಗಿದೆ.

ಬಂಧಿತನನ್ನು ವೀರೇಂದ್ರ ಎಂದು ಗುರುತಿಸಿದ್ದು, ಜೀವನ್‌, ಗಣೇಶ್‌, ಕರುಂಬಯ್ಯ ಹಾಗೂ ಮಹೇಶ್‌ ಎಂಬವರು ಪರಾರಿಯಾಗಿದ್ದಾರೆ. ಬಂಧಿತ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪ ಅರಣ್ಯಸಂರಕ್ಷಣಾಧಿಕಾರಿ ಕ್ರಿಸ್ತರಾಜ್‌, ರೋಷಿಣಿ, ಗೋಪಾಲ್‌, ಪ್ರಶಾಂತ್‌, ಕುಮಾರ್‌, ಅಶೋಕ್‌ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)