ಮಂಗಳವಾರ, ಮಾರ್ಚ್ 31, 2020
19 °C
ಕೊಡಗು ಜಿಲ್ಲಾ ಪೊಲೀಸರ ಮನವಿ

ಸಾರ್ವಜನಿಕರು ಪಾಲಿಸಬೇಕಾದ ಸೂಚನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊರೊನಾ ವೈರಸ್‌ ಕೊಡಗಿನಲ್ಲಿ ತಲ್ಲಣ ಮೂಡಿಸಿದ್ದು ಅದನ್ನು ತಡೆಯಲು ಸಾರ್ವಜನಿಕರು ಕೆಲವು ಸೂಚನೆಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸೂಚನೆಗಳು ಈ ಕೆಳಗಿನಂತೆ ಇವೆ...
* ಜನಜಂಗುಳಿಯಿಂದ ದೂರವಿರಬೇಕು
* ಮಾರ್ಚ್ 31ರ ತನಕ ಮನೆಯಲ್ಲಿಯೇ ಇರಬೇಕು
* ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೊರಗೆ ಬನ್ನಿ
* ಕೈಗಳನ್ನು ಚೆನ್ನಾಗಿ ಸೋಪಿನಿಂದ ತೊಳೆಯುತ್ತಿರಬೇಕು
* ಶುದ್ಧ ಕುಡಿಯುವ ನೀರನ್ನೇ ಕುಡಿಯಿರಿ
* ಯಾವುದೇ ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸಬಾರದು
* ಯಾವುದೇ ದೊಡ್ಡ ಸಮಾರಂಭಗಳನ್ನು ಆಯೋಜಿಸುವುದು ಬೇಡ
* ವಿದೇಶಗಳಿಂದ ಹಿಂತಿರುಗಿದ್ದರೆ ಕನಿಷ್ಠ 14 ದಿನಗಳ ಕಾಲ ಕಡ್ಡಾಯವಾಗಿ ಮನೆಯ ಒಳಗೆಯೇ ಇರುವುದು. ಕೊರೊನಾ ಗುಣ ಲಕ್ಷಣ ಕಂಡುಬಂದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು
* ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಕಾಣಬೇಕು
* ಯಾರೂ ಭಯಭೀತರಾಗಬಾರದು. ಆದರೆ, ಸೂಚನೆಗಳನ್ನು ಪಾಲಿಸಬೇಕು
* ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ
* ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ
* ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ
* ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು
* ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಕೊರೊನಾ ತಡೆಗಟ್ಟಬಹುದು
* ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಿ
* ಗೃಹ ಬಂಧನದಲ್ಲಿ ಇರಲು ಸೂಚಿಸಿರುವ ವ್ಯಕ್ತಿಗಳು ಮನೆಯ ಹೊರಗಡೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)