ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಾರದೆ ಜನಸ್ಪಂದನ: ಎನ್.ಎಸ್.ಭೋಸರಾಜು

Published 7 ಜುಲೈ 2024, 5:22 IST
Last Updated 7 ಜುಲೈ 2024, 5:22 IST
ಅಕ್ಷರ ಗಾತ್ರ

ಮಡಿಕೇರಿ: ‘ಜಿಲ್ಲಾಧಿಕಾರಿ ಮೂಲಕ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದು ಜನಸ್ಪಂದನ ಮಾಡಬೇಕು. ಆದರೆ, ‌ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಏಕಾಏಕಿ ಜನಸ್ಪಂದನ ನಡೆಸಿ, ಸಹಕಾರ ಕೊಡಲಿಲ್ಲ ಎನ್ನಬಾರದು’ ಎಂದು ಸಚಿವ ಎನ್.ಎಸ್.ಭೋಸರಾಜು ಪ್ರತಿಪಾದಿಸಿದರು.

‘ಅಹಿಂದ ಸಮಾವೇಶ ಖಚಿತವಾಗಿಲ್ಲ. ನಡೆದರೂ ಶಕ್ತಿ ಪ್ರದರ್ಶನವಲ್ಲ. ಸಿಎಂಗೆ ಅದರ ಅಗತ್ಯವಿಲ್ಲ. ಡಿಸಿಎಂಗೂ ಇಲ್ಲ. ವಿವಿಧ ಸಮಾಜಗಳು ತಮ್ಮ ಬೇಡಿಕೆಗಳ ಕುರಿತು ಗಮನ ಸೆಳೆಯಲು ಸಮಾವೇಶ ನಡೆಸುತ್ತವೆ. ಅಹಿಂದ ಸಮಾವೇಶವೂ ಅದೇ ರೀತಿಯದ್ದು. ಸಿಎಂ, ಡಿಸಿಎಂ ಇಬ್ಬರಿಗೂ ಅದು ಶಕ್ತಿ ತುಂಬುತ್ತದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾದಿಂದ ಇನ್ನಷ್ಟು ಪರಿಹಾರ ನೀಡಬೇಕಿತ್ತು. ಅವರಿಗೆ ಹೆಚ್ಚು ಅನ್ಯಾಯವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT