ಮಡಿಕೇರಿ: ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಘೋಷಣೆಯೊಂದಿಗೆ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ರಕ್ಷಿಸಿ, ಬಲಪಡಿಸಲು 50 ಲಕ್ಷ ಸಹಿ ಸಂಗ್ರಹ ಅಭಿಯಾನದಲ್ಲಿ ಈಗ 10 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಗಳಾಗಿವೆ ಎಂದು ಎಐಡಿಎಸ್ಓ ಜಿಲ್ಲಾ ಸಹಸಂಚಾಲಕಿ ಸ್ವಾತಿ ತಿಳಿಸಿದ್ದಾರೆ.

6,200 ಸರ್ಕಾರಿ ಶಾಲೆಗಳನ್ನು ಹಬ್ ಅಂಡ್ ಸ್ಪೋಕ್ ಮಾದರಿಯಡಿ ಸಂಯೋಜನೆ ಹೆಸರಲ್ಲಿ ಮುಚ್ಚಲು ಹೊರಟಿರುವ ಕರ್ನಾಟಕ ಸರ್ಕಾರದ ಜನವಿರೋಧಿ ನಿರ್ಧಾರದ ವಿರುದ್ಧದ ಈ ಹೋರಾಟವನ್ನು ದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಹಾಗೂ ಕರ್ನಾಟಕದ ಶಿಕ್ಷಣ ಪ್ರೇಮಿ ಜನತೆ ಪ್ರಮುಖ ಘಟ್ಟ ತಲುಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಜನರು ತೋರಿಸಿರುವ ಏಕತೆ, ಧೈರ್ಯ ಮತ್ತು ಬದ್ಧತೆಯು ಅಸಾಧ್ಯವನ್ನೂ ಸಾಧ್ಯವಾಗಿಸಬಹುದು ಎಂಬುದನ್ನು ಎತ್ತಿ ತೋರಿಸಿದೆ. ಪ್ರತಿಯೊಂದು ಸಹಿಯೂ ಕೇವಲ ಹಾಳೆಯ ಮೇಲಿನ ಶಾಯಿ ಅಷ್ಟೇ ಅಲ್ಲ, ಅದು ಪ್ರತಿಯೊಬ್ಬ ಮಕ್ಕಳಿಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣದ ಹಕ್ಕನ್ನು ರಕ್ಷಿಸಲು ಹೋರಾಡುತ್ತಿರುವ ಪ್ರತಿಯೊಬ್ಬರ ಹೃದಯದ ಧ್ವನಿಯಾಗಿದೆ. ಇದು 10 ಲಕ್ಷ ಸಹಿಗಳನ್ನು ದಾಟಿದ ನಮಗೆ ಮತ್ತಷ್ಟು ಶಕ್ತಿ ಮತ್ತು ದೃಢ ನಂಬಿಕೆಯನ್ನು ನೀಡುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.