ಕೊಡಗು ಪ್ರವಾಸದಲ್ಲಿ ರಾಷ್ಟ್ರಪತಿ ಪುತ್ರ

7

ಕೊಡಗು ಪ್ರವಾಸದಲ್ಲಿ ರಾಷ್ಟ್ರಪತಿ ಪುತ್ರ

Published:
Updated:

ಮಡಿಕೇರಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಕುಟುಂಬಸ್ಥರು ಕೊಡಗು ಜಿಲ್ಲಾ ಪ್ರವಾಸದಲ್ಲಿದ್ದು, ಸಿದ್ದಾಪುರದ ಖಾಸಗಿ ಕಾಫಿ ತೋಟದ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಅವರ ಪುತ್ರ ಪ್ರಶಾಂತ್‌ ಕುಮಾರ್, ಸೊಸೆ ಗೌರಿ ಹಾಗೂ ಮೊಮ್ಮಕ್ಕಳಾದ ಅಭಿಮನ್ಯು, ಅನನ್ಯಾ ಅವರು ಭಾನುವಾರ ಜಿಲ್ಲೆಗೆ ಆಗಮಿಸಿದ್ದು, ಅವರನ್ನು ಮಡಿಕೇರಿ ತಹಶೀಲ್ದಾರ್‌ ಕುಸುಮಾ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಜಗನ್ನಾಥ್‌ ಬರ ಮಾಡಿಕೊಂಡರು.

ಸಂಪಾಜೆಯಿಂದ ಮಡಿಕೇರಿಗೆ ಬರುವಾಗ ಮದೆನಾಡು, ಜೋಡುಪಾಲದಲ್ಲಿ ಉಂಟಾಗಿದ್ದ ಭೂಕುಸಿತ ಸ್ಥಳಕ್ಕೂ ಭೇಟಿ ನೀಡಿದ್ದರು. ಮಂಗಳವಾರ ಜಿಲ್ಲೆಯಿಂದ ವಾಪಸ್ ಆಗುವ ಸಾಧ್ಯತೆಯಿಂದ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !