ಕುಶಾಲನಗರ ಸಮೀಪದ ಕಣಿವೆ ರಾಮಲಿಂಗೇಶ್ಚರ ಸ್ವಾಮಿ ರಥೋತ್ಸವಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
ಕುಶಾಲನಗರ ಸಮೀಪದ ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಬಳಿಯ ಆಕರ್ಷಕ ತೂಗು ಸೇತುವೆ..
ಜೀವ ನದಿ ಕಾವೇರಿ ಪೂರ್ವಾಭಿಮುಖವಾಗಿ ಹರಿದಿರುವ ಏಕೈಕ ಪುಣ್ಯ ಕ್ಷೇತ್ರ ಇದಾಗಿದ್ದು ನಾಡಿನ ಎಲ್ಲಿಯೂ ಇಂತಹ ಕ್ಷೇತ್ರ ಕಾಣಸಿಗದು. ಶ್ರೀರಾಮ ಲಕ್ಷ್ಮಣ ಹಾಗೂ ಆಂಜನೇಯ ಅವರ ಪಾದ ಸ್ಪರ್ಶಗೊಂಡ ಈ ಸ್ಥಳ ಶ್ರೇಷ್ಠ ಧಾರ್ಮಿಕ ಕ್ಷೇತ್ರ
ಎಚ್.ಆರ್.ರಾಘವೇಂದ್ರ ಆಚಾರ್ ಪ್ರಧಾನ ಅರ್ಚಕರು
ಕಣಿವೆ ಗ್ರಾಮದಲ್ಲಿ ಎಲ್ಲ ಸಮುದಾಯದವರು ಸಾಮರಸ್ಯದಿಂದ ಜೀವನ ನಡೆಸಿಕೊಂಡು ಬರುತ್ತಿದ್ದು ಒಟ್ಟಾಗಿ ರಥೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಈ ರಥೋತ್ಸವಕ್ಕೆ ಕೊಡಗು ಸೇರಿದಂತೆ ಮೈಸೂರು ಹಾಸನ ಜಿಲ್ಲೆಯ ಗಡಿಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ