ಬುಧವಾರ, ಜನವರಿ 22, 2020
24 °C

ಅಜ್ಜಿಮುಟ್ಟ : ಸೊರಗಿದ ರಸ್ತೆ, ಬೇಕಿದೆ ದುರಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಇಲ್ಲಿನ ಗ್ರಾಮ ಪಂಚಾಯಿತಿಗೆ ಒಳಪಟ್ಟ ಅಜ್ಜಿಮುಟ್ಟ ಗ್ರಾಮ ಹದಗೆಟ್ಟ ರಸ್ತೆಗಳಿಂದ ಸೊರಗಿದೆ. ವರ್ಷಗಳ ಹಿಂದೆ ಹಾಕಿದ್ದ ಡಾಂಬರ್‌ ಕಿತ್ತುಹೋಗಿ ಕೇವಲ ಜಲ್ಲಿಕಲ್ಲುಗಳು ಮಾತ್ರ ಉಳಿದಿವೆ. ದುರಸ್ತಿ ಕಾಣದ ರಸ್ತೆಯಲ್ಲಿ ಜನ ಸಂಚರಿಸುವುದೇ ದುಸ್ತರವಾಗಿದೆ.

ರಸ್ತೆಯುದ್ದಕ್ಕೂ ಗುಂಡಿಗಳಿರುವ ಕಾರಣ, ಗ್ರಾಮಸ್ಥರು ಪಟ್ಟಣಕ್ಕೆ ಬರಲು ಸಾಹಸ ಪಡಬೇಕಾಗಿದೆ. ರಸ್ತೆ ದುಸ್ಥಿತಿಯಿಂದಾಗಿ ಬಾಡಿಗೆ ವಾಹನಗಳು ಬರಲು ಈ ಮಾರ್ಗದಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.

ಗ್ರಾಮದುದ್ದಕ್ಕೂ ಸಾಗಿದರೆ ಶತಮಾನ ಕಂಡ ಸರ್ಕಾರಿ ಪ್ರಾಥಮಿಕ ಶಾಲೆ ಸಿಗುತ್ತದೆ. ಈ ಶಾಲೆಗೆ ಶಿಕ್ಷಕರು ತೆರಳಬೇಕಾದರೆ ನಾಲ್ಕು ಕಿ.ಮೀ. ಹದಗೆಟ್ಟ ದಾರಿಯಲ್ಲಿ ಸಾಗಬೇಕು. ಸರ್ಕಾರಿ ಶಾಲೆಯಲ್ಲಿ ಒಬ್ಬರೇ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಟ್ಟಣದಿಂದ ಕೊಡವ ಸಮಾಜದ ರಸ್ತೆಗಾಗಿ ಅಜ್ಜಿಮುಟ್ಟ ಗ್ರಾಮದ ಮೂಲಕ ಎಮ್ಮೆಮಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

ಈ ರಸ್ತೆಯ ಅಭಿವೃದ್ದಿಗೆ ₹75 ಲಕ್ಷ ಮಂಜೂರಾಗಿದ್ದು ಅನತಿ ದೂರದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಗ್ರಾಮೀಣ ರಸ್ತೆ ಸಂಪೂರ್ಣ ದುಸ್ಥಿತಿಗೊಳಗಾಗಿದೆ. ರಸ್ತೆಯ ದುಸ್ಥಿತಿಯನ್ನು ಪರಿಶೀಲಿಸಿ ರಸ್ತೆಯ ಮರುಡಾಂಬರೀಕರಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

15 ವರ್ಷಗಳಿಂದ ಅಜ್ಜಿಮುಟ್ಟ ಗ್ರಾಮದ ರಸ್ತೆಯನ್ನು ಅಭಿವೃದ್ದಿಪಡಿಸಿಲ್ಲ. ಪಟ್ಟಣಕ್ಕೆ ತೆರಳಲು ರಸ್ತೆ ದುಸ್ಥಿತಿಯಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಗ್ರಾಮದ ರಸ್ತೆ ಅಭಿವೃದ್ದಿಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಅಜ್ಜಿಮುಟ್ಟ ಗ್ರಾಮಸ್ಥ ಬಾಳೆಯಡ ಪ್ರಕಾಶ್ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು