ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು | ಮಹಾಲಿಂಗೇಶ್ವರ ಸನ್ನಿಧಿಯಲ್ಲಿ  ರುದ್ರಾಭಿಷೇಕ

Published 27 ಜೂನ್ 2024, 13:44 IST
Last Updated 27 ಜೂನ್ 2024, 13:44 IST
ಅಕ್ಷರ ಗಾತ್ರ

ನಾಪೋಕ್ಲು: ಬೆಟ್ಟಗೇರಿ ವಲಯ ಕಾಂಗ್ರೆಸ್ ಘಟಕದಿಂದ ಪಾಲೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಹೆಸರಿನಲ್ಲಿ ಮಹಾರುದ್ರಾಭಿಷೇಕ ಪೂಜೆ ಕೈಗೊಳ್ಳಲಾಯಿತು.

ಶಾಸಕರಿಗೆ ಅವರ ಅಧಿಕಾರದ ಅವಧಿಯಲ್ಲಿ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ವಲಯದಿಂದ ಪೂಜೆ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಶ್ರೇಯೋಭಿವೃದ್ಧಿಗೆ ಪಕ್ಷದ ಹಿರಿಯರಾದ ನಾಪಂಡ ಗಣೇಶ ಹೆರವನಾಡು ಪ್ರಾರ್ಥನೆ ಸಲ್ಲಿಸಿದರು. 

ಬೆಟ್ಟಗೇರಿ ವಲಯ ಅಧ್ಯಕ್ಷ ಕೊಡಗನ ತೀರ್ಥಪ್ರಸಾದ್, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಳಿಯಂಡ ಕಮಲ ಉತ್ತಯ, ಜಿಲ್ಲಾ ಕಾಂಗ್ರೆಸ್ ಸದಸ್ಯ ಮೋಹನ್ ರಾಜ್, ಬೂತ್ ಅಧ್ಯಕ್ಷ ಕಾಳೇರಮ್ಮನ ಕುಮಾರ್, ಅರ್ವತೊಕ್ಲು ಬೂತ್ ಅಧ್ಯಕ್ಷ ಪೂಜಾರಿರ ಪ್ರದೀಪ್ ಕುಮಾರ, ವಲಯದ ಉಪಾಧ್ಯಕ್ಷ ಬಾಲಾಡಿ ಪ್ರತಾಪ್, ಪಾಲೂರು ಬೂತ್ ಅಧ್ಯಕ್ಷ ದೊರೆರಾಜ್, ಮಚ್ಚಂಡ ಲಾಲು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT