ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಚೆಟ್ಟಳ್ಳಿಯ ಪೊನ್ನತಮೊಟ್ಟೆಯಲ್ಲಿರುವ 1ರಿಂದ 8ನೇ ತರಗತಿಯವರೆಗೆ ಇರುವ ಸರ್ಕಾರಿ ಶಾಲೆ ಶಿಥಿಲಾವಸ್ಥೆಗೆ ತಲುಪಿದೆ. ಕುಸಿಯುತ್ತಿರುವ ಚಾವಣಿ ನಿಜಕ್ಕೂ ಆತಂಕ ಮೂಡಿಸಿದೆ.

ಈ ಶಾಲೆಗೆ ಹೋದರೆ ಮುರಿದ ಗೇಟು, ಸೋರುವ ಸೂರು, ಅಪಾಯಕಾರಿ ಎನಿಸುವ ವಿದ್ಯುತ್ ತಂತಿಗಳೇ ಸ್ವಾಗತಿಸುತ್ತವೆ. ಇವುಗಳೆಲ್ಲ ದಾಟಿ ಒಳ ಹೊಕ್ಕರೆ ಚಾವಣಿ ಇನ್ನೇನು ಬೀಳುವುದೋ ಎಂಬ ಭೀತಿ ಮೂಡಿಸುತ್ತದೆ. ಇಂತಹ ಅಪಾಯಕಾರಿ ವಾತಾವರಣದಲ್ಲಿ ಮಕ್ಕಳು ಕಲಿಯಬೇಕಿದೆ, ಶಿಕ್ಷಕರು ಕಲಿಸಬೇಕಿದೆ.

ಶಾಲೆಯ ಗೇಟಿನ ಮುಂಭಾಗ 11 ಕೆ.ವಿ ಸಾಮರ್ಥ್ಯದ ಹೈಟೆಂಕ್ಷನ್ ವಿದ್ಯುತ್ ಸಂಪರ್ಕದ ವಿದ್ಯುತ್ ಪರಿವರ್ತಕ ಇದ್ದು, ಅದರ ತಂತಿಗಳು ಶಾಲಾ ಕಟ್ಟಡದ ಹಿಂಭಾಗದಲ್ಲೇ ಹಾದು ಹೋಗಿವೆ. ಇದರಲ್ಲಿ ಕಾಡುಬಳ್ಳಿಗಳು ವಿದ್ಯುತ್ ತಂತಿಯನ್ನು ಸುತ್ತುವರಿದು ಅಪಾಯಕಾರಿಯಾಗಿ ಪರಿಣಮಿಸಿವೆ. ಕೆಲವೊಮ್ಮೆ ತಂತಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಆದರೂ, ಸೆಸ್ಕ್ ಇನ್ನೂ ದುರಸ್ತಿಪಡಿಸಿಲ್ಲ. ವಿದ್ಯುತ್ ಸಂಪರ್ಕದ ಸಮೀಪವಿರುವ ಅಪಾಯಕಾರಿ ಕಾಡುಮರಗಳನ್ನು ಕಡಿಯಲು ಅರಣ್ಯಇಲಾಖೆಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯ ಸುತ್ತಲೂ ಕಾಡು ಬೆಳೆದಿದ್ದರೂ ಶುಚಿಗೊಳಿಸುವವರಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ತುಂಡಾಗಿ ನೇತಾಡುವ ವಿದ್ಯುತ್ ವಯರ್, ಕಿತ್ತುಹೋದ ಮೀಟರ್, ಶಾಲೆಯ ಗೋಡೆಗಳಲ್ಲಿರುವ ವಿದ್ಯುತ್ ವಯರ್ಗಳೆಲ್ಲ ಕಿತ್ತುಬಂದಿದ್ದು ಕೆಲವೆಡೆ ತುಂಡಾಗಿವೆ. ಮೀಟರ್ ಬಾಕ್ಸ್ ಕಿತ್ತುಬಂದಿವೆ. ಪುಟ್ಟಪುಟ್ಟ ಮಕ್ಕಳು ಅರಿವಿಲ್ಲದೆ ವಿದ್ಯುತ್ ವಯರ್ಗಳನ್ನು ಮುಟ್ಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಪೊನ್ನತಮೊಟ್ಟೆ ಸರ್ಕಾರಿ ಶಾಲಾ ಕಟ್ಟಡ ದುಸ್ಥಿತಿಯಲ್ಲಿರುವ ಕುರಿತು ಗ್ರಾಮಸಭೆಯಲ್ಲೂ ಪ್ರಸ್ತಾಪವಾಗಿತ್ತು. ‘ ನನ್ನ ಎರಡು ಮಕ್ಕಳನ್ನು ನಿತ್ಯವೂ ಭಯದಲ್ಲೇ ಶಾಲೆಗೆ ಕಳುಹಿಸುತಿದ್ದೇನೆ. ಮುಂದೆ ಅನಾಹುತ ಆಗುವ ಮೊದಲೇ ಎಚ್ಚೆತ್ತು ಕೊಳ್ಳಬೇಕು’ ಎಂದು ಪೋಷಕರಾದ ಶೌಕತ್ ಅಲಿ ಅವರು ಮನವಿ ಮಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ಶಾಲಾ ಶೈಕ್ಷಣಿಕ ವರ್ಷದ ಪರೀಕ್ಷೆಗಳು ಮುಗಿದು ಬೇಸಿಗೆ ರಜೆಯಲ್ಲಿ ಶಾಲಾ ಕಟ್ಟಡ ದುರಸ್ಥಿ ಕಾರ್ಯ ನಡೆಸದೇ ನಿರ್ಲಕ್ಷ್ಯವಹಿಸಲಾಗಿದೆ ಎಂದು ಸ್ಥಳಿಯರು ಹೇಳುತ್ತಾರೆ. ಮಕ್ಕಳ ಹಳೆಯ ಶೌಚಾಲಯ ಕಟ್ಟಡ ದುರಸ್ಥಿ ಮಾಡದೆಯೇ ನೂತನ ಶೌಚಾಲಯ ನಿರ್ಮಿಸಿ ಹಳೆಯ ಕಟ್ಟಡವನ್ನು ಪಾಳುಬಿಡಲಾಗಿದೆ.

ಶಾಲಾ ಕಟ್ಟಡ ದುರಸ್ಥಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದೆಯಾದರೂ ಅಧಿಕಾರಿಗಳು ಖುದ್ದಾಗಿ ಪರೀಕ್ಷಿಸಿ ಅನುಮತಿ ನೀಡಬೇಕಿದೆ.
ನತಲೀಯ ಮುಖ್ಯ ಶಿಕ್ಷಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.