ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜಾದ ಕೇಂದ್ರಗಳು

ನಾಳೆಯಿಂದ ಪರೀಕ್ಷೆ ಆರಂಭ, ವಿದ್ಯಾರ್ಥಿಗಳಿಗೆ ಮಾಸ್ಕ್‌ ವಿತರಣೆ
Last Updated 24 ಜೂನ್ 2020, 13:21 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಕೋವಿಡ್–19 ಆತಂಕದ ನಡುವೆ ಗುರುವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಳ್ಳಲಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೇಲೂ ಕೋವಿಡ್ ಕಾರ್ಮೋಡ ಕವಿದಿದೆ.

ಪರೀಕ್ಷೆಯು ಜೂನ್ 25ರಿಂದ ಜುಲೈ 3ರ ವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ತಲಾ 8 ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 11 ಸೇರಿ ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಒಟ್ಟು 7,149 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 3,562 ಬಾಲಕರು ಹಾಗೂ 3,587 ಬಾಲಕಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್‌.ಮಚ್ಚಾಡೋ ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಲಾ 2 ಮಾಸ್ಕ್ ಒದಗಿಸಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿಯಲ್ಲಿ 2,081, ಸೋಮವಾರಪೇಟೆಯಲ್ಲಿ 2,895, ವಿರಾಜಪೇಟೆಯಲ್ಲಿ 2,173 ಒಟ್ಟು 7,149 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೂರು ತಾಲ್ಲೂಕಿನಲ್ಲಿ ತಲಾ 2 ಮೀಸಲು ಕೇಂದ್ರಗಳಿದ್ದು, ಮಡಿಕೇರಿಯಲ್ಲಿ 2, ಸೋಮವಾರಪೇಟೆಯಲ್ಲಿ 2 ಮತ್ತು ವಿರಾಜಪೇಟೆಯಲ್ಲಿ 2 ಕೇಂದ್ರಗಳಿವೆ.

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ತಲುಪಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಶಾಲಾ ವಾಹನದಲ್ಲಿ ಬರುವ ವಿದ್ಯಾರ್ಥಿಗಳು ಮಡಿಕೇರಿಯಲ್ಲಿ 408, ವಿರಾಜಪೇಟೆಯಲ್ಲಿ 390, ಸೋಮವಾರಪೇಟೆಯಲ್ಲಿ 380 ಮಂದಿ ಸೇರಿ ಒಟ್ಟು 1,178 ವಿದ್ಯಾರ್ಥಿಗಳಿದ್ದಾರೆ. ಕಾಲ್ನಡಿಗೆ ಹಾಗೂ ಬೈಸಿಕಲ್‍ನಲ್ಲಿ ಬರುವ ವಿದ್ಯಾರ್ಥಿಗಳು ಮಡಿಕೇರಿಯಲ್ಲಿ 600, ವಿರಾಜಪೇಟೆಯಲ್ಲಿ 269, ಸೋಮವಾರಪೇಟೆಯಲ್ಲಿ 1,120 ಮಂದಿ ಸೇರಿದಂತೆ ಒಟ್ಟು 1,989 ವಿದ್ಯಾರ್ಥಿಗಳಿದ್ದಾರೆ.

ಪೋಷಕರು ಕರೆತರುವ ಮಕ್ಕಳ ಸಂಖ್ಯೆ ಮಡಿಕೇರಿಯಲ್ಲಿ 535, ವಿರಾಜಪೇಟೆಯಲ್ಲಿ 580, ಸೋಮವಾರಪೇಟೆಯಲ್ಲಿ 981 ಮಂದಿ ಸೇರಿ ಒಟ್ಟು 2,096 ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಮಡಿಕೇರಿಯಲ್ಲಿ 117, ವಿರಾಜಪೇಟೆಯಲ್ಲಿ 140, ಸೋಮವಾರಪೇಟೆಯಲ್ಲಿ 110 ಮಂದಿ ಸೇರಿ ಒಟ್ಟು 367, ಕೆಎಸ್‍ಆರ್‌ಟಿಸಿ ಅಥವಾ ಬಾಡಿಗೆ ವಾಹನದಲ್ಲಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಮಡಿಕೇರಿಯಲ್ಲಿ 949, ವಿರಾಜಪೇಟೆಯಲ್ಲಿ 330, ಸೋಮವಾರಪೇಟೆಯಲ್ಲಿ 240 ವಿದ್ಯಾರ್ಥಿಗಳು ಸೇರಿ ಒಟ್ಟು 1519 ವಿದ್ಯಾರ್ಥಿಗಳಿದ್ದಾರೆ.

ಮಡಿಕೇರಿಯಲ್ಲಿ 50, ಸೋಮವಾರಪೇಟೆ 58, ವಿರಾಜಪೇಟೆ 22 ವಿದ್ಯಾರ್ಥಿಗಳು ಹೊರ ಜಿಲ್ಲೆ, ತಾಲ್ಲೂಕುಗಳಿಂದ ಬಂದಿದ್ದಾರೆ. ಮಡಿಕೇರಿಯಿಂದ 19, ಸೋಮವಾರಪೇಟೆಯಿಂದ 47 ಮತ್ತು ವಿರಾಜಪೇಟೆಯಿಂದ 60 ವಿದ್ಯಾರ್ಥಿಗಳು ಹೊರ ಜಿಲ್ಲೆ, ತಾಲ್ಲೂಕುಗಳಿಗೆ ತೆರಳಿದ್ದಾರೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT