ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಯಲ್ಸ್ ವಿರಾಜಪೇಟೆ’ಗೆ ಅಗ್ರ ಸ್ಥಾನ

ಕೆ.ಸಿ.ಎಲ್ ಐದನೇ ಆವೃತ್ತಿಯ ಕ್ರಿಕೆಟ್‌ ಟೂರ್ನಿಗೆ ಚಾಲನೆ
Last Updated 4 ಏಪ್ರಿಲ್ 2021, 2:13 IST
ಅಕ್ಷರ ಗಾತ್ರ

ಸಿದ್ದಾಪುರ: ‘ಸಿಟಿ ಬಾಯ್ಸ್ ಯುವಕ ಸಂಘ’ದ ವತಿಯಿಂದ ಆಯೋಜಿಸಿರುವ ಕೊಡಗು ಚಾಂಪಿಯನ್ಸ್ ಲೀಗ್‌ ಐದನೇ ಆವೃತ್ತಿಯ ಕ್ರಿಕೆಟ್ ಟೂರ್ನಿಗೆ ಕರಡಿಗೋಡುವಿನ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಹಿರಿಯರಾದ ಕುಕ್ಕುನೂರು ಪುರುಷೋತ್ತಮ ಟೂರ್ನಿಗೆ ಚಾಲನೆ ನೀಡಿದರು.

ವೇದಿಕೆ ಕಾರ್ಯಕ್ರಮದಲ್ಲಿ ಗ್ರಾ.ಪಂ‌ ಅಧ್ಯಕ್ಷರಾದ ರೀನಾ ತುಳಸಿ‌ ಮಾತನಾಡಿ, ‘ಸಿದ್ದಾಪುರ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೈದಾನ ಇಲ್ಲದೇ ಕ್ರೀಡಾಪಟುಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸಾರ್ವಜನಿಕ ಮೈದಾನ ನಿರ್ಮಿಸಲು ಗ್ರಾಮ ಪಂಚಾಯಿತಿ ವತಿಯಿಂದ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಎಂ.ಎಸ್ ವೆಂಕಟೇಶ್ ಮಾತನಾಡಿ, ‘ಗ್ರಾಮೀಣ ಭಾಗದ ಯುವ ಕ್ರೀಡಾ ಪ್ರತಿಭೆಗಳಿಗೆ ಕೆ.ಸಿ.ಎಲ್ ಉತ್ತಮ ವೇದಿಕೆಯಾಗಿದೆ’ ಎಂದರು.

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗೀಸ್ ಮಾತನಾಡಿ, ‘ಮೈದಾನದ ಕೊರತೆ ನಡುವೆಯೂ ಕರಡಿಗೋಡುವಿನಲ್ಲಿ ಪೂರ್ಣ ಪ್ರಮಾಣದ ಮೈದಾನ ನಿರ್ಮಿಸಿ, ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಿಡಿಒಗಳಾದ ವಿಶ್ವನಾಥ್, ಅನಿಲ್ ಕುಮಾರ್ ಮಾತನಾಡಿದರು. ಕೆ.ಸಿ.ಎಲ್ ಸಮಿತಿ ಅಧ್ಯಕ್ಷರಾದ ರೆಜಿತ್ ಕುಮಾರ್, ದೇವಪ್ರಕಾಶ್, ಕವಿತಾ ಪ್ರಕಾಶ್, ಜಾಯ್ ದೀಪ್ ಬ್ಯಾನರ್ಜಿ, ಖಲೀಲ್, ಶಿಯಾಬ್, ಗೌತಮ್ ಪ್ರಸಾದ್, ಜಂಶೀರ್, ಬಾವ ಮಾಲ್ದಾರೆ, ಸಲೀಂ, ಬಷೀರ್, ರಿಯಾಜ್, ಶಫೀಕ್, ಎ.ಎಸ್ ಮುಸ್ತಫಾ ಸೇರಿದಂತೆ ಇನ್ನಿತರರು
ಇದ್ದರು.

ಮೊದಲ ದಿನ ‘ರಾಯಲ್ಸ್ ವಿರಾಜಪೇಟೆ’ ತಂಡ ಮೂರು ಪಂದ್ಯಗಳಲ್ಲಿ ವಿಜೇತವಾಗಿ 6 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ.

ಟೀಂ ಕೊಂಬನ್, ರೆಡ್ ಬ್ಯಾಕ್‌ ಸ್ಪೈಡರ್ಸ್, ರ್‍ಯಾಂಬೋ, ಫ್ರೆಂಡ್ಸ್ ಕ್ರಿಕೆಟರ್ಸ್ ಹಾಗೂ ಕ್ರಿಯೇಟಿವ್‌ ಕ್ರಿಕೆಟರ್ಸ್‌ ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT