ಶನಿವಾರ, ಮೇ 21, 2022
27 °C

ಸಂಚಾರ ನಿಯಮ ಉಲ್ಲಂಘನೆ: ಮಾಲೀಕನಿಗೆ ₹16 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ದಾಖಲೆ ಇಲ್ಲದ, ಸಂಚಾರ ನಿಯಮ ಉಲ್ಲಂಘಿಸಿದ ಅಶೋಕ ಲೇಲ್ಯಾಂಡ್ ಪಿಕಪ್ ವಾಹನದ ಮಾಲೀಕ, ತಾವರೆಕೆರೆ ಕೊಪ್ಪಲಿನ ಟಿ.ಎನ್.ಭರತ್ ಎಂಬುವರಿಗೆ ಸೋಮವಾರಪೇಟೆ ನ್ಯಾಯಾಲಯವು ಬುಧ ವಾರ ₹16 ಸಾವಿರ ದಂಡ ವಿಧಿಸಿದೆ.

ಮೇ 3ರಂದು ಸರಕು ಸಾಗಣೆ ವಾಹನದಲ್ಲಿ ಜನರನ್ನು ಕರೆದೊಯ್ಯುತ್ತಿದ್ದಾಗ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ತಡೆದು ನಿಲ್ಲಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆದರೆ, ಅಗತ್ಯ ದಾಖಲೆ ಇರಲಿಲ್ಲ. ಜತೆಗೆ ಭರತ್‌ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಹೀಗಾಗಿ, ಪೊಲೀಸರು ವಾಹನವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದರು.

ಭರತ್‌ ₹16 ಸಾವಿರ ದಂಡ ಪಾವತಿಸಿ ವಾಹನವನ್ನು ಬಿಡಿಸಿಕೊಂಡು ಹೋಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಗೋವಿಂದ್ ರಾಜ್,
ಸಿಬ್ಬಂದಿ ಲೋಕೇಶ್, ಮುರಳಿ, ಸತೀಶ್, ನಿಶಾ ಹಾಗೂ ಕುಮಾರ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು