ಬುಧವಾರ, ಆಗಸ್ಟ್ 10, 2022
25 °C

ಕೊಡಗು: 41 ಮರಿಗಳಿಗೆ ಜನ್ಮ ನೀಡಿದ ಕೊಳಕುಮಂಡಲ ಹಾವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ (ಕೊಡಗು): ಸಮೀಪದ ಗುಹ್ಯ ಗ್ರಾಮದ ನಿವಾಸಿ ಉರಗ ಪ್ರೇಮಿ ಸುರೇಶ್‌ ಮನೆಯಲ್ಲಿ ಸೋಮವಾರ ಕೊಳಕುಮಂಡಲ ಹಾವು 41 ಮರಿಗಳಿಗೆ ಜನ್ಮ ನೀಡಿದೆ.

ವಾರದ ಹಿಂದೆ ಇಲ್ಲಿನ ಮೈಸೂರು ರಸ್ತೆಯ ಬಡಾವಣೆಯೊಂದರ ಮನೆ ಬಳಿ ಕಲ್ಲುಗಳ ನಡುವೆ ಕೊಳಕುಮಂಡಲ ಹಾವು ಕಂಡು ಬಂದಿತ್ತು. ಸುರೇಶ್‌ ಅವರು ಜೆಸಿಬಿ ಯಂತ್ರದ ಮೂಲಕ ಹಾವನ್ನು ರಕ್ಷಿಸಿದ್ದರು. ಈ ವೇಳೆ ಹಾವಿಗೆ ಗಾಯವಾಗಿದ್ದರಿಂದ ತಮ್ಮ ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡಿದ್ದರು.

ಚೇತರಿಸಿಕೊಂಡ ಹಾವು ಮರಿಗಳಿಗೆ ಜನ್ಮ ನೀಡಿದೆ. ಮರಿಗಳು ಹಾಗೂ ಹಾವನ್ನು ತಿತಿಮತಿ ಅರಣ್ಯಕ್ಕೆ ಬಿಟ್ಟಿದ್ದು, ಸುರೇಶ್‌ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು