ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಮಿತಿ ಮೀರಿದ ಕಾಡಾನೆ ಉಪಟಳ

Published 24 ಏಪ್ರಿಲ್ 2024, 4:30 IST
Last Updated 24 ಏಪ್ರಿಲ್ 2024, 4:30 IST
ಅಕ್ಷರ ಗಾತ್ರ

ಸಿದ್ದಾಪುರ: ಕರಡಿಗೋಡು ಗ್ರಾಮದಲ್ಲಿ ಕಾಡಾನೆ ಉಪಟಳ ಮಿತಿಮೀರಿದ್ದು, ಇವುಗಳನ್ನು ಕಾಡಿಗೆ ಅಟ್ಟಬೇಕೆಂದು ಬೆಳೆಗಾರರು ಒತ್ತಾಯಿಸಿದರು.

 ಗ್ರಾಮದ ಟೀಕ್ ವುಡ್ ಎಸ್ಟೇಟ್, ಕರಡಿಕಾಡು ಎಸ್ಟೇಟ್, ಕೆಸವಿನಹಳ್ಳ ಸೇರಿ ಸುತ್ತಮುತ್ತಲ ವ್ಯಾಪ್ತಿ ಕಾಫಿ ತೋಟದಲ್ಲಿ ಕಾಡಾನೆಗಳು ನಿರಂತರ ಬೀಡುಬಿಟ್ಟಿದ್ದು, ಫಸಲು ನಾಶ ಮಾಡುತ್ತಿವೆ. ಮತ್ತೊಂದೆಡೆ ಕಾರ್ಮಿಕರು ಭಯದಿಂದ ಕೆಲಸ ನಿರ್ವಹಿಸುವ ಸ್ಥಿತಿ ಎದುರಾಗಿದೆ. ಕಾಫಿ, ಅಡಿಕೆ ಫಸಲು ಪ್ರತಿ ದಿನವೂ ನಾಶವಾಗುತ್ತಿದ್ದು, ಕಾಡಾನೆ ಹಾವಳಿಯಿಂದ ರೈತರು ಹಾಗೂ ಬೆಳೆಗಾರರು ಹೈರಾಣಾಗಿದ್ದಾರೆ.

ಭಾನುವಾರ ರಾತ್ರಿ ಕೆಸವಿನಹಳ್ಳ ಸಮೀಪದ ಟೀಕ್ ವುಡ್ ತೋಟದ ಮನೆಯ ಸಮೀಪಕ್ಕೆ ರೇಡಿಯೋ ಕಾಲರ್ ಅಳವಡಿಸಿರುವ ಸಲಗವೊಂದು ಆಗಮಿಸಿದ್ದು, ಹಲಸು ಸೇರಿದಂತೆ ಹಣ್ಣುಗಳನ್ನು ತಿಂದಿದ್ದು, ರಾತ್ರಿ ವೇಳೆ ಮನೆಯ ಸಮೀಪದಲ್ಲೇ ಬೀಡುಬಿಟ್ಟಿದೆ. ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಲೈನ್ ಮನೆಗಳ ಸಮೀಪದಲ್ಲೇ ಇದ್ದು, ತೋಟದ ಕಾರ್ಮಿಕರು ಕೂಡ ಭಯಭೀತರಾಗಿದ್ದಾರೆ. ಇವುಗಳನ್ನು ಕಾಡಿಗೆ ಅಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT