ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಮಹಿಳಾಮಯವಾದ ದಸರೆ, ನಾರಿಶಕ್ತಿ ಅನಾವರಣ

ವಿವಿಧ ಸ್ಪರ್ಧೆಗಳಲ್ಲಿ 300ಕ್ಕೂ ಅಧಿಕ ಮಹಿಳೆಯರು ಭಾಗಿ
Published 23 ಅಕ್ಟೋಬರ್ 2023, 6:25 IST
Last Updated 23 ಅಕ್ಟೋಬರ್ 2023, 6:25 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ದಸರೆ ಸಂಪೂರ್ಣ ಮಹಿಳಾಮಯವಾಗಿತ್ತು. ನಾರಿಶಕ್ತಿ ಇಲ್ಲಿ ಅನಾವರಣಗೊಂಡು, ಹೆಣ್ಣಿನ ಧೈರ್ಯ, ಸಾಮರ್ಥ್ಯ, ಸೃಜನಶೀಲತೆಗಳು ಅಭಿವ್ಯಕ್ತಗೊಂಡವು.

ಸುಮಾರು 300ಕ್ಕೂ ಅಧಿಕ ಮಹಿಳೆಯರು ಇಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ವಿಧಾನ ಪ‍ರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಅವರು 8ನೇ ವರ್ಷದ ಮಹಿಳಾ ದಸರೆಯನ್ನು ಉದ್ಘಾಟಿಸಿದರು. ಗ್ರಾಮೀಣ ಮಹಿಳೆಯರಿಗೆ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.

ಬಳಿಕ ನಡೆದ ಎಥ್‌ನಿಕ್ ಫ್ಯಾಷನ್ ಶೋನಲ್ಲಿ ಸಾಂ‍ಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿದ್ದು ಸೂಜಿಗಲ್ಲಿನಂತೆ ಸೆಳೆಯಿತು. ಇದರಲ್ಲಿ ವೈಭವಿ ಸಂದೀಪ್ ಪ್ರಥಮ, ಲಿಖಿತಾ, ಕುಡೆಕಲ್ ಸುರಕ್ಷಾ ದ್ವಿತೀಯ, ತೇಜಸ್ವಿನಿ ತೃತೀಯ ಬಹುಮಾನ ಗಳಿಸಿದರು.

ಕರ್ನಾಟಕದ ವಿವಿಧ ಉಡುಗೆಗಳ ಸ್ಪರ್ಧೆಯಲ್ಲಿ ಎನ್.ಎ.ಗೀತಾ ಪ್ರಥಮ, ಮುತ್ತಮ್ಮ ದ್ವಿತೀಯ, ಪಾರ್ವತಿ ತೃತೀಯ ಬಹುಮಾನ ಗಳಿಸಿದರು.

ಗಾರ್ಭಾ ನೃತ್ಯದಲ್ಲಿ ನಾಟ್ಯಾಂಜಲಿ ತಂಡ ಪ್ರಥಮ, ಸುರಕ್ಷಾ ತಂಡ ದ್ವಿತೀಯ ಹಾಗೂ ಕ್ರೇಜಿ ಕ್ವೀನ್ ತಂಡ ತೃತೀಯ ಬಹುಮಾನ ಪಡೆಯಿತು.

ಮೆಹಂದಿ ಸ್ಪರ್ಧೆಯಲ್ಲಿ ಗೀತಾ ಪ್ರಥಮ, ರೋನಿಕಾ ದ್ವಿತೀಯ, ಇಂದಿರಾ ತೃತೀಯ ಬಹುಮಾನ ಪಡೆದರು.

ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವ ಸ್ಪರ್ಧೆಯಲ್ಲಿ ಪುಷ್ಪಲತಾ ಪ್ರಥಮ, ನಳಿನಿ ದ್ವಿತೀಯ, ದಮಯಂತಿ ತೃತೀಯ ಬಹುಮಾನ ಪಡೆದರು.

ಕೋಲಿಗೆ ರಿಂಗ್ ಹಾಕುವ ಸ್ಪರ್ಧೆಯಲ್ಲಿ ಕೆ.ಎಂ.ಶ್ವೇತಾ ಪ್ರಥಮ, ಬಿ.ಬಿ.ನಳಿನಿ ದ್ವಿತೀಯ, ತುಳಸಿ ಸುಂದರ ತೃತೀಯ ಬಹುಮಾನ, ಬಕೆಟ್‌ಗೆ ಚೆಂಡನ್ನು ಹಾಕುವ ಸ್ಪರ್ಧೆಯಲ್ಲಿ ಭುವನೇಶ್ವರಿ ಪ್ರಥಮ, ಸರೋಜಾ ದ್ವಿತೀಯ, ವಿಮಲಾವತಿ ತೃತೀಯ ಬಹುಮಾನ ಪಡೆದರು.

ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯವ ಸ್ಪರ್ಧೆಯಲ್ಲಿ ಹರಿಣಾಕ್ಷಿ ಪ್ರಥಮ, ತಾರಾಮಣಿ ದ್ವಿತೀಯ, ಮಂಜುಳಾ ತೃತೀಯ ಬಹುಮಾನ ಪಡೆದರು.

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸವಿತಾ ತಂಡ ಪ್ರಥಮ, ಭಗವತಿ ಕಾಲೂರು ತಂಡವು ದ್ವಿತೀಯ ಹಾಗೂ  ವೀಣಾ ತಂಡ ತೃತೀಯ ಬಹುಮಾನ ಗಳಿಸಿದವು.

ಕಾರ್ಯಕ್ರಮದಲ್ಲಿ ಮೂರ್ನಾಡು ಬಾಡಗದ ಅಂಗನವಾಡಿ ಕಾರ್ಯಕರ್ತೆ ಬಿ.ಬಿ ಜಯಂತಿ ರೈ, ಕಡಗದಾಳು ಆರೋಗ್ಯ ಕಾರ್ಯಕರ್ತೆ ಎಸ್.ಇ.ಲೀಲಾವತಿ ಹಾಗೂ ಪೌರಕಾರ್ಮಿಕರಾದ ಡಿ.ಲಕ್ಷ್ಮಿ ಅವರನ್ನು ಗೌರವಿಸಲಾಯಿತು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ತಂಡ ಸೇರಿದಂತೆ ಹಲವು ನೃತ್ಯತಂಡಗಳು ವೈವಿಧ್ಯಮಯ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದವು.

ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾ ಅಧಿಕಾರಿ ನಟರಾಜ್, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯಾ, ಮಡಿಕೇರಿ ದಸರಾ ಸಮಿತಿ ಖಜಾಂಚಿ ಅರುಣ್ ಶೆಟ್ಟಿ, ವೇದಿಕೆ ಸಮಿತಿ ಅಧ್ಯಕ್ಷೆ ಕನ್ನಂಡ ಕವಿತಾ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಪುಷ್ಪಾ, ರಜೀನಾ, ಮಹಿಳಾ ದಸರೆಯ ಸಂಚಾಲಕಿ ಕುಡೆಕಲ್ ಸವಿತಾ, ಮಹಿಳಾ ಮುಖಂಡರಾದ ಲೀಲಾ ಶೇಷಮ್ಮ, ಬಿ.ಬಿ.ಪುಷ್ಪಾವತಿ, ಸುರಯ್ಯ ಅಬ್ರಾರ್, ಜುಲೇಕಾಬಿ, ಆರ್.ಎಂ.ಚಿತ್ರಾ, ಅನಿತಾ, ಭಾರತೀ ರಮೇಶ್ ಇದ್ದರು.

ಮಡಿಕೇರಿಯಲ್ಲಿ ಭಾನುವಾರ ನಡೆದ ಮಹಿಳಾ ದಸರೆಯಲ್ಲಿ ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಚಿತ್ರ: ರಂಗಸ್ವಾಮಿ

ಮಡಿಕೇರಿಯಲ್ಲಿ ಭಾನುವಾರ ನಡೆದ ಮಹಿಳಾ ದಸರೆಯಲ್ಲಿ ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಚಿತ್ರ: ರಂಗಸ್ವಾಮಿ

ಮಡಿಕೇರಿಯಲ್ಲಿ ಭಾನುವಾರ ನಡೆದ ಮಹಿಳಾ ದಸರೆಯಲ್ಲಿ ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾದರು
ಚಿತ್ರ: ರಂಗಸ್ವಾಮಿ
ಮಡಿಕೇರಿಯಲ್ಲಿ ಭಾನುವಾರ ನಡೆದ ಮಹಿಳಾ ದಸರೆಯಲ್ಲಿ ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾದರು ಚಿತ್ರ: ರಂಗಸ್ವಾಮಿ
ಮಡಿಕೇರಿ ಗಾಂಧಿ ಮೈದಾನದಲ್ಲಿ ಪೌರಕಾರ್ಮಿಕರ ತಂಡವು ಭಾನುವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯವನ್ನು ಪ್ರಸ್ತುತಪಡಿಸಿತು
ಚಿತ್ರ: ರಂಗಸ್ವಾಮಿ
ಮಡಿಕೇರಿ ಗಾಂಧಿ ಮೈದಾನದಲ್ಲಿ ಪೌರಕಾರ್ಮಿಕರ ತಂಡವು ಭಾನುವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯವನ್ನು ಪ್ರಸ್ತುತಪಡಿಸಿತು ಚಿತ್ರ: ರಂಗಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT