ಸಿದ್ದಾಪುರ: ಬೇಸಿಗೆ ಬಂತೆಂದರೆ ಒಳಗೆ ಕೂರಲಾಗದಂತಹ ಪರಿಸ್ಥಿತಿ. ಹೊರ ಬಂದರೆ ಕಾಡಾನೆ, ಹುಲಿ, ಚಿರತೆ, ಹಾವುಗಳ ಭಯ. ಮಳೆಗಾಲದಲ್ಲಿ ಸೋರುವ ಸೂರು. ನೆಲವೆಲ್ಲಾ ಕೆಸರುಗದ್ದೆ. ಇನ್ನು, ಚಳಿಗಾಲದ ಮಾತು ಬಿಡಿ. ಮೂಲಭೂತ ಸೌಕರ್ಯ ಬಲು ದೂರ. ಕಂಗೆಡಿಸುವ ಅಕಾಲಿಕ ವಿದ್ಯುತ್ ವ್ಯವಸ್ಥೆ. ಅಡಿಗೆ ಮಾಡಿಕೊಳ್ಳಲು ಯಾವುದೇ ವ್ಯವಸ್ಥೆಗಳಿಲ್ಲ. ಹಾಸಲು, ಹೊದ್ದುಕೊಳ್ಳಲು ಇರುವುದೇ ಹರಕು ಚಾಪೆ, ಕಂಬಳಿ. ಹಗಲಿನ ಪರಿಸ್ಥಿತಿ ಕ್ಲಿಷ್ಟಕರವಾದರೆ ರಾತ್ರಿ ಭಯಾನಕ! ಇದು ಯಾವುದೇ ಹಾಡಿಯ ಜನರ ಬದುಕಲ್ಲ. ನಮ್ಮ ಗಡಿ ಕಾಯುವ ಪೂಲೀಸರ ನಿತ್ಯದ ನರಕಯಾತನೆ.

-ಇದು ಸಿದ್ದಾಪುರ ಸಮೀಪದ ಮಾಲ್ದಾರೆ ಪೊಲೀಸ್ ಚೆಕ್ ಪೋಸ್ಟ್ನ ಕಥೆ ಮತ್ತು ವ್ಯಥೆ. ಅನೇಕ ವರ್ಷಗಳಿಂದ ಇಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಬದುಕು ನಿಜಕ್ಕೂ ದಾರುಣ. ಕೊಡಗಿನಿಂದ ಮೈಸೂರಿನೆಡೆಗೆ ಅತ್ತಿಂದಿತ್ತ ವಾಹನಗಳು ಚಲಿಸುವುದು ಬಿಟ್ಟರೆ, ಉಳಿದಂತೆ ಈ ಪ್ರದೇಶ ಶುದ್ಧ ಹಾಡಿ.

ಇಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಲಾಗಿಲ್ಲ. ಗೇಟ್ ಕಾಯುವ ಪೊಲೀಸರು ತಾತ್ಕಾಲಿಕವಾಗಿ ತಂಗಲು ಒಂದು ಶೆಡ್ ನಿರ್ಮಿಸಿಕೊಂಡಿದ್ದರೂ ಒಳಗೆ ಕೂರಲೂ ಆಗದಂತಹ, ಹೊರಗೆ ನಿಲ್ಲಲೂ ಆಗದಂತಹ ಪರಿಸ್ಥಿತಿ. ಇದರ ಕಾಯಕಲ್ಪಕ್ಕೆ ಹಿರಿಯ ಅಧಿಕಾರಿಗಳಲ್ಲಿ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತಾದರೂ ಗೇಟ್ ಕಾಯುವ ಪೊಲೀಸರ ವಸತಿಗೊಂದು ಮೋಕ್ಷ ಮಾತ್ರ ದೊರಕಲಿಲ್ಲ.

ಸಿದ್ದಾಪುರದಿಂದ ಹತ್ತು ಕಿ.ಮೀ. ದೂರದಲ್ಲಿರುವ ಮಾಲ್ದಾರೆ ಗೇಟ್ ಕೊಡಗು ಮತ್ತು ಮೈಸೂರು ಜಿಲ್ಲೆಯ ನಡುವೆ ಸರಹದ್ದಾಗಿದೆ. ಇಲ್ಲಿ ಪೊಲೀಸರು ಸದಾ ಹದ್ದಿನ ಕಣ್ಣಿಟ್ಟೇ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸುತ್ತಲೂ ಅರಣ್ಯ ಪ್ರದೇಶವಾಗಿರುವುದರಿಂದ ಅರಣ್ಯೋತ್ಪನ್ನಗಳ ಕಳ್ಳ ಸಾಗಾಟ, ಅನಧಿಕೃತ ಮದ್ಯ ಸಾಗಾಣಿಕೆ, ಗೋಮಾಂಸ ಸಾಗಾಟ, ಇತರೆ ಅಕ್ರಮ ಮತ್ತು ಅಪರಾಧ ಚಟುವಟಿಕೆಗಳು ಇಲ್ಲಿ ನಿರಂತರ ನಡೆಯುತ್ತಿರುತ್ತವೆ. ಅಲ್ಲದೆ, ಕೃಷಿ ಉತ್ಪನ್ನಗಳ ಕಾನೂನು ಬಾಹಿರ ಸಾಗಾಟ ಬೇರೆ. ಕ್ರಿಮಿನಲ್ ಚಟುವಟಿಕೆಗಳು ನಿತ್ಯದ ಪ್ರಕರಣಗಳಾಗಿವೆ. ಇಲ್ಲಿ ಕರ್ತವ್ಯ ನಿರ್ವಹಿಸಿದ ಅನೇಕ ಪೊಲೀಸರು ಬಹುತೇಕ ಕಾರ್ಯಾಚರಣೆ ನಡೆಸಿ ಯಶಸ್ವಿಯಾದ ಉದಾಹರಣೆಗಳೂ ಇವೆ.

ಮಾಲ್ದಾರೆ ಪೊಲೀಸ್ ಚೆಕ್ ಪೋಸ್ಟ್ ಇಂತಹ ಸೂಕ್ಷ್ಮ ಪ್ರದೇಶವಾಗಿರುವುದರಿಂದ ವಿನೂತನ ಸೌಲಭ್ಯಗಳು ಹಾಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಾಗಬೇಕಿದೆ. ಮಾಲ್ದಾರೆ ಗೇಟಿನಲ್ಲಿ ಕರ್ತವ್ಯ ನಿರ್ವಹಿಸುವುದೆಂದರೆ ಇಲ್ಲಿನ ಪೊಲೀಸರಿಗೆ ಧರ್ಮ ಸಂಕಟ.

ಸಿದ್ದಾಪುರ ಠಾಣಾ ವ್ಯಾಪ್ತಿಯ ಅಧೀನದಲ್ಲಿರುವ ಮಾಲ್ದಾರೆ ಗೇಟ್ ನೆರೆಯ ಕೇರಳ, ತಮಿಳುನಾಡಿಗೆ ಸಾಗುವ ಹೆದ್ದಾರಿಗಳನ್ನು ಬೆಸೆಯುತ್ತದೆ. ಇಲ್ಲಿ ಕಲ್ಪಿಸಬೇಕಾದ ಸೌಕರ್ಯಗಳಿಗೆ ತಾಂತ್ರಿಕತೆಯ ತೊಡಕು ಉಂಟಾಗಿರುವುದು ವಿಪರ್ಯಾಸ. ಪ್ರಸ್ತುತ ಪೊಲೀಸ್ ಚೆಕ್ ಪೋಸ್ಟ್ ಅರಣ್ಯ ಇಲಾಖೆಯ ಜಾಗದಲ್ಲಿರುವುದು ಇದರ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇಲ್ಲಿ ಪೊಲೀಸರು ನಿರ್ವಹಿಸುವ ಕಾರ್ಯ ಅರಣ್ಯ ಇಲಾಖೆಯವರಿಗೂ ಅನುಕೂಲಕರವಾಗಿದ್ದರೂ ಪೊಲೀಸರ ನರಕಯಾತನೆಗೆ ಸುಖಾಂತ್ಯದ ಮಾತು ಬಲು ದೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.