ಮಡಿಕೇರಿ: ಜಿಲ್ಲೆಯಲ್ಲಿ ತರಕಾರಿ ಬೆಲೆ ಗ್ರಾಹಕರ ಕೈಗೆಟಕುವಂತಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಈಗ ಬೆಲೆ ಇಳಿಕೆ ಕಂಡಿದೆ. ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಬೀನ್ಸ್, ಟೊಮೆಟೊ, ಬೀಟ್ರೂಟ್, ಕ್ಯಾಬೇಜ್ ಸೇರಿದಂತೆ ಹಲವು ತರಕಾರಿಯ ಬೆಲೆಗಳು ಇಳಿಮುಖವಾಗಿವೆ.
ಫೆಬ್ರುವರಿ ತಿಂಗಳಿನಿಂದಲೂ ತರಕಾರಿ ದರ ಸ್ವಲ್ಪ ಮಟ್ಟಿಗೆ ಇಳಿಕೆಯಾಗುತ್ತಿದ್ದು. ಈ ತಿಂಗಳು ಗ್ರಾಹಕರಿಗೆ ತರಕಾರಿ ಅಗ್ಗದ ಬೆಲೆಗೆ ದೊರಕುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ತರಕಾರಿ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರು ಇದೀಗ ನಿರಾಳರಾಗಿದ್ದಾರೆ.
ನೆರೆಯ ಹಾಸನ, ಮೈಸೂರು ಜಿಲ್ಲೆಗಳ ರೈತರು ಜನವರಿ–ಫೆಬ್ರುವರಿ ತಿಂಗಳಿನಲ್ಲಿ ಬೆಳೆದ ತರಕಾರಿ ಫಸಲು ಈಗ ಮಾರುಕಟ್ಟೆಗೆ ಬರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಗೆ ತರಕಾರಿ ಸರಬರಾಜು ಆಗುತ್ತಿರುವುದರಿಂದ ಬೆಲೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳಿದರು.
ತರಕಾರಿ ದರ ಹೀಗಿದೆ (ಪ್ರತಿ ಕೆ.ಜಿಗೆ ₨)
ಬೀನ್ಸ್ 28