ಮಡಿಕೇರಿ: ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳು ಆರಂಭವಾಗಿದ್ದು, ಮತದಾರರ ಪಟ್ಟಿ, ಮತಗಟ್ಟೆ ವಿವರ, ಸಿಬ್ಬಂದಿ ನಿಯೋಜನೆ ಮತ್ತಿತರ ಕಾರ್ಯಚಟುವಟಿಕೆಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು ತಿಳಿಸಿದರು.

ನಗರದ ಕೋಟೆ ಹಳೇ ವಿಧಾನ ಸಭಾಮಗಣದಲ್ಲಿ ಗುರುವಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

2014ರ ಜನವರಿ 1ಕ್ಕೆ ಜಿಲ್ಲೆಯಲ್ಲಿ 4,11,581 ಮತದಾರರಿದ್ದು, ಇವರಲ್ಲಿ ಪುರುಷರು 2,04,941, ಮಹಿಳಾ ಮತದಾರರ ಸಂಖ್ಯೆ 2,06,640 ಇದ್ದಾರೆ ಎಂದರು.

9452 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಈ ಪೈಕಿ ಪುರುಷರು 4,636, ಮಹಿಳಾ ಮತದಾರರ ಸಂಖ್ಯೆ 4,916 ಆಗಿದೆ. 4.2 ಲಕ್ಷ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 526 ಮತಗಟ್ಟೆ ಕೇಂದ್ರಗಳಲ್ಲಿ 526 ಮತಯಂತ್ರಗಳು, ಹೆಚ್ಚುವರಿಯಾಗಿ 78 ಮತಯಂತ್ರಗಳನ್ನು ಮೀಸಲಿಡಲಾಗುತ್ತದೆ. ಮತಗಟ್ಟೆ ಕೇಂದ್ರಗಳಿಗೆ 17 ಪ್ಲೈಯಿಂಗ್ ಸ್ಕ್ವಾಡ್, 15 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಮತದಾನ ಮಾಡಲು ಮತದಾರರ ಗುರುತಿನ ಚೀಟಿಯ ಜೊತೆಗೆ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಯೋಗದ ವೆಬ್ಸೈಟ್: ceokarnataka.kar.nic.in ಅಥವಾ ಮೊಬೈಲ್ನಲ್ಲಿ karepic<space> ಎಂದು ಟೈಪ್ ಮಾಡಿ ಮತದಾರರ ಗುರುತು ಚೀಟಿ ಸಂಖ್ಯೆ ನಮೂದಿಸಿ 9243355223ಕ್ಕೆ ಎಸ್ಎಂಎಸ್ ಕಳುಹಿಸಿದರೆ ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬ ಮಾಹಿತಿ ಲಭ್ಯವಾಗುತ್ತದೆ ಎಂದರು.

ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಆರಂಭಿಸಿದ್ದು, 1950ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಮಾಹಿತಿಗೆ ಜಿಲ್ಲಾ ಚುನಾವಣೆ ಶಾಖೆ: 08272-225932, ನಗರಸಭೆ ಕಚೇರಿ:08272-228323, ತಾಲ್ಲೂಕು ಕಚೇರಿ (ಮಡಿಕೇರಿ):08272-228396, ತಾಲ್ಲೂಕು ಕಚೇರಿ (ವಿರಾಜಪೇಟೆ):08274-257328, ತಾಲ್ಲೂಕು ಕಚೇರಿ (ಸೋಮವಾರಪೇಟೆ): 08276-282045 ಹಾಗೂ ಉಪ ವಿಭಾಗಾಧಿಕಾರಿ-08272-225469 ಸಂಪರ್ಕಿಸಬಹುದು.

ಸಹಾಯಕ ಚುನಾವಣಾಧಿಕಾರಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿರಾಮ್ ಜಿ.ಶಂಕರ್ (8971275071), ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಲ್ಲಿಕಾರ್ಜುನಯ್ಯ (9739601935) ಕಾರ್ಯನಿರ್ವಹಿಸಲಿದ್ದಾರೆ.

ನಿಯಂತ್ರಣ ಕೊಠಡಿ ಪ್ರಕ್ರಿಯೆ ಆರಂಭ
ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ದೂರುಗಳಿಗೆ ದಿನದ 24 ಗಂಟೆಯೂ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ (ನಿಯಂತ್ರಣ ಕೊಠಡಿ) ತೆರೆಯಲಾಗಿದೆ. ದೂರವಾಣಿ ಸಂಖ್ಯೆ 08272-220302 ಕರೆ ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.