ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಂಟಿ ಕ್ರಿಕೆಟ್‌ನಲ್ಲಿ ಕೊಹ್ಲಿ ಆಟ ಖಚಿತ

ಆಫ್ಗಾನಿಸ್ಥಾನ ವಿರುಧ್ದದ ಮೊದಲ ಟೆಸ್ಟ್‌ ಪಂದ್ಯಕ್ಕೆ ಅಲಭ್ಯ
Last Updated 3 ಮೇ 2018, 20:10 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ ಟೂರ್ನಿಯ ತಂಡ ಸರೆ ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂಬರುವ ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಗೆ ಸಜ್ಜುಗೊಳ್ಳುವ ಉದ್ದೇಶದಿಂದ ಅವರು ಕೌಂಟಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ.

ಇದರಿಂದಾಗಿ ಬೆಂಗಳೂರಿನಲ್ಲಿ ಜೂನ್‌ 14ರಂದು ಆರಂಭವಾಗುವ ಆಫ್ಗಾನಿಸ್ಥಾನ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ.

‘ವಿಶ್ವದ ಶ್ರೇಷ್ಠ ಬ್ಯಾಟ್ಸಮನ್‌ ನಮ್ಮ ತಂಡದಲ್ಲಿ ಆಡಲಿದ್ದಾರೆ ಎಂಬುದೇ ಸಂತಸದ ವಿಷಯ. ಜೂನ್‌ ತಿಂಗಳು ಪೂರ್ತಿ ಕೊಹ್ಲಿ ಅವರು ಕೌಂಟಿ ಕ್ರಿಕೆಟ್‌ ಆಡಲಿದ್ದಾರೆ’ ಎಂದು ಕ್ಲಬ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

‘ಕೌಂಟಿಯಲ್ಲಿ ಆಡಬೇಕೆನ್ನುವುದು ನನ್ನ ಬಹುಕಾಲ ಕನಸಾಗಿತ್ತು. ಇದು ನನಸಾಗಲು ಕಾರಣರಾದ ಸರೆ ಕ್ಲಬ್‌ನ ನಿರ್ದೇಶಕ ಅಲೆಕ್‌ ಸ್ಟೀವರ್ಟ್‌ ಹಾಗೂ ಅದರ ಆಡಳಿತ ಮಂಡಳಿಗೆ ಕೃತಜ್ಞನಾಗಿದ್ದೇನೆ’ ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

‘ನಮ್ಮ ತಂಡದಲ್ಲಿ ಕೊಹ್ಲಿ ಆಡುವುದರಿಂದ ಇತರ ಆಟಗಾರರಿಗೆ ಹೆಚ್ಚಿನ ಉಪಯೋಗವಾಗಲಿದೆ. ಕೊಹ್ಲಿ ಅವರಿಂದ ಅನೇಕ ಸಲಹೆಗಳನ್ನು ಪಡೆದುಕೊಳ್ಳಲು ಆಟಗಾರರಿಗೆ ಅನುಕೂಲವಾಗುತ್ತದೆ’ ಎಂದು ಅಲೆಕ್‌ ಅಭಿಪ್ರಾಯಪಟ್ಟಿದ್ದಾರೆ.

ಜೂನ್‌ 9ರಂದು ಆರಂಭವಾಗುವ ಹ್ಯಾಂಪ್‌ಶೈರ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೌಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಪಂದ್ಯ ಜೂನ್‌ 12ಕ್ಕೆ ಮುಗಿದರೆ, 13ರಂದು ಅವರು ಬೆಂಗಳೂರಿಗೆ ತೆರಳುವರು.

ಜೂನ್‌ 20ರಿಂದ 23ರವರೆಗೆ ನಡೆಯುವ ಎರಡನೇ ಕೌಂಟಿ ಪಂದ್ಯದಲ್ಲಿ ಸೋಮರ್‌ಸೆಟ್‌ ತಂಡದ ವಿರುದ್ಧ ಅವರು ಕಣಕ್ಕಿಳಿಯಲಿದ್ದಾರೆ. ಜೂನ್‌ 25ರಿಂದ 28ರವರೆಗೆ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಯಾರ್ಕ್‌ಶೈರ್‌ ತಂಡದ ವಿರುದ್ಧ ಅವರು ಆಡಲಿದ್ದಾರೆ. ಇದೇ ಪಂದ್ಯದಲ್ಲಿ ಭಾರತದ ಮತ್ತೊಬ್ಬ ಆಟಗಾರ ಚೇತೆಶ್ವರ್‌ ಪೂಜಾರ ಅವರು ಯಾರ್ಕ್‌ಶೈರ್‌ ತಂಡದಲ್ಲಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT