ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ‌| ಕೊತ್ತಂಬರಿ ಕಂತೆಗೆ ₹80 ದರ

Published 29 ಮೇ 2024, 23:28 IST
Last Updated 29 ಮೇ 2024, 23:28 IST
ಅಕ್ಷರ ಗಾತ್ರ

ಕೋಲಾರ: ಕೊತ್ತಂಬರಿ ಸೊಪ್ಪಿನ ದರ ದಿಢೀರನೇ ಏರಿಕೆ ಕಂಡಿದ್ದು ಚಿಲ್ಲರೆ ಮಾರುಕಟ್ಟೆ ಯಲ್ಲಿ ಕಂತೆಗೆ ₹80ರವರೆಗೆ ಮಾರಾಟವಾಗುತ್ತಿದೆ.

ತಿಂಗಳ ಹಿಂದೆಯಷ್ಟೇ 150 ಕಂತೆಗಳ ಒಂದು ಮೂಟೆ ಕೊತ್ತಂಬರಿಗೆ ₹1,500 ಇತ್ತು. ಈಗ ಒಂದು ಮೂಟೆ ₹12 ಸಾವಿರದವರೆಗೆ ಮಾರಾಟವಾಗುತ್ತಿದೆ.

ಬೆಂಗಳೂರು, ಚೆನ್ನೈ, ಈರೋಡ್‌, ಹೈದರಾಬಾದ್‌, ತಿರುಪತಿಯ ವರ್ತಕರಿಂದ ಗುಣಮಟ್ಟದ ಕೊತ್ತಂಬರಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದರೆ, ಫಸಲು ಕಡಿಮೆಯಾಗಿ ಪೂರೈಕೆ ತಗ್ಗಿದೆ.

ಮಾರ್ಚ್‌, ಏಪ್ರಿಲ್‌ನಲ್ಲಿ ಬಿಸಿಲ ಧಗೆ ಹೆಚ್ಚಿತ್ತು. ಹೀಗಾಗಿ, ಈ ಬಾರಿ ಕೊತ್ತಂಬರಿ ಬೀಜ ಬಿತ್ತನೆ ಮಾಡಲು ಹೆಚ್ಚಿನ ರೈತರು ಮುಂದಾಗಲಿಲ್ಲ. ಕೆಲವೆಡೆ ಬೆಳೆದರೂ ಸರಿಯಾಗಿ ಫಸಲು ಬರಲಿಲ್ಲ. ನೀರಾವರಿ ಪ್ರದೇಶದಲ್ಲಿ ಬೆಳೆದವರೂ ಬೆಲೆ ಇಲ್ಲದೆ ಕೈ ಸುಟ್ಟುಕೊಂಡರು. ಕೆಲವರು ಮಾವಿನ ತೋಪಿನಲ್ಲಿ ಕೊತ್ತಂಬರಿ ಸೊಪ್ಪು ಬೆಳೆದಿದ್ದಾರೆ. ಮೇ ತಿಂಗಳ ಆರಂಭದಲ್ಲಿ ಸುರಿದ ಭಾರಿ ಮಳೆಯಿಂದ ಬೆಳೆಗೆ ಹಾನಿ ಉಂಟಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT