ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳಿಂದ ಬಾಡಿಗೆ ಬಾಕಿ | ಅಂಗನವಾಡಿಗೆ ಬೀಗ; ಶಿಕ್ಷಕಿ ಮನೆಯಲ್ಲಿ ಪಾಠ, ಬಿಸಿಯೂಟ

Published 4 ಸೆಪ್ಟೆಂಬರ್ 2023, 21:39 IST
Last Updated 4 ಸೆಪ್ಟೆಂಬರ್ 2023, 21:39 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ಲಾಯದ ಬೀದಿಯ ಅಂಗನವಾಡಿ ಕೇಂದ್ರದ ಕಟ್ಟಡದ ಮಾಲೀಕರಿಗೆ ಶಿಶು ಪಾಲನ ಅಭಿವೃದ್ಧಿ ಇಲಾಖೆ ಒಂಬತ್ತು ತಿಂಗಳ ಬಾಡಿಗೆ ಪಾವತಿಸದ ಕಾರಣ ಕಟ್ಟಡದ ಮಾಲಿಕ ಬೀಗ ಹಾಕಿದ್ದಾರೆ.

ಹಾಗಾಗಿ ಸೋಮವಾರ ಅಂಗನವಾಡಿ ಕಾರ್ಯಕರ್ತೆ ನಾಗಲಕ್ಷ್ಮಿ ಅವರ ಮನೆಯ ಆವರಣದಲ್ಲಿ ಮಕ್ಕಳಿಗೆ ಪಾಠ ಮಾಡಿ, ಅಲ್ಲಿಯೇ ಬಿಸಿಯೂಟ ಬಡಿಸಿದರು.

ಪಟ್ಟಣದಲ್ಲಿ ಒಟ್ಟು 16 ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಕೆಲವು ಅಂಗನವಾಡಿ ಕಟ್ಟಡಗಳಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದೆ. ಜನವರಿ ತಿಂಗಳಿನಿಂದ ಸೆಪ್ಟಂಬರ್ ವರೆಗಿನ ಬಾಡಿಗೆ ಇಲಾಖೆಯು ಪಾವತಿಸದ ಕಾರಣ ಅಂಗನವಾಡಿ ಕೇಂದ್ರಕ್ಕೆ ಕಟ್ಟಡಗಳ ಮಾಲೀಕ ಬೀಗ ಜಡಿದಿದ್ದಾರೆ. ಇದರಿಂದ ಮಕ್ಕಳು ಬೀದಿಯಲ್ಲಿ ನಿಲ್ಲಬೇಕಾಯಿತು.

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಪಾವತಿಸಲು ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಬಿಲ್‌ ಕಳಿಸಲಾಗಿದೆ. ಸರ್ಕಾರದಿಂದ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಅನುದಾನ ಬಿಡುಗಡೆಯಾದ ನಂತರ ಬಾಡಿಗೆ ಕಟ್ಟಡದಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಪಾವತಿಸಲಾಗುವುದು. ಅಲ್ಲಿಯವರೆಗೆ ಲಾಯದ ಬೀದಿಯ ಅಂಗನವಾಡಿ ಕೇಂದ್ರದ ಕಟ್ಟಡದ ಮಾಲೀಕರ ಮನವೊಲಿಸಿ ಅಂಗನವಾಡಿ ಕೇಂದ್ರ ನಡೆಸಲಾಗುವುದು ಎಂದು ಶಿಶು ಪಾಲನ ಅಭಿವೃದ್ಧಿ ಅಧಿಕಾರಿ ಬೈರಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT