ಬಂಗಾರಪೇಟೆ: ಶ್ರೀನಿವಾಸಪುರದಲ್ಲಿ ಆರ್ಎಫ್ಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಪಟ್ಟಣದ ನಿವಾಸಿ ರಾಮಕೃಷ್ಣಪ್ಪ ಅವರ ಮನೆ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ಆಸ್ತಿ ಮತ್ತು ಇತರೆ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಆದಾಯಕ್ಕಿಂತ ಹೆಚ್ಚಾಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ ಆರೋಪದಡಿ ದಾಳಿ ನಡೆದಿದೆ. ಬೆಂಗಳೂರಿನಿಂದ ನಾಲ್ಕು ವಾಹನಗಳಲ್ಲಿ ಬಂದಿದ್ದ ಎಸಿಬಿ ಪೊಲೀಸರು ಬೆಳಿಗ್ಗೆಯಿಂದ ರಾತ್ರಿವರೆಗೂ ದಾಖಲೆ ಪರಿಶೀಲಿಸಿದರು.

ಪಟ್ಟಣದಲ್ಲಿದ್ದ ರಾಮಕೃಷ್ಣಪ್ಪ ಅವರ ಮನೆ, ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸಪುರ ಆರ್ಎಫ್ಒ ಕಚೇರಿ, ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಟ್ಟಹಳ್ಳಿ ಗ್ರಾಮದ ಮನೆ ಹಾಗೂ ಪಟ್ಟಣದಲ್ಲಿರುವ ಸಂಬಂಧಿ ಪುರಸಭೆ ಸದಸ್ಯರೊಬ್ಬರ ಮನೆ, ಬಾರ್ ಮತ್ತು ರೆಸ್ಟೋರೆಂಟ್ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ.

ರಾಮಕೃಷ್ಣಪ್ಪ ಅವರು ಆದಾಯಕ್ಕಿಂತಲೂ ಅಧಿಕ ಬೆಲೆ ಬಾಳುವ ನಿವೇಶನ, ಐಷಾರಾಮಿ ಬಂಗಲೆ, ಕಾರು, ಚಿನ್ನದ ಒಡವೆ ಮತ್ತು ಸಂಬಂಧಿಕರ ಹೆಸರಲ್ಲಿಯೂ ಅಕ್ರಮ ಆಸ್ತಿ ಮಾಡಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.