ಮುಳಬಾಗಿಲು: ಪ್ರತಿಯೊಬ್ಬ ಮನುಷ್ಯ ಪೋಷಕಾಂಶವುಳ್ಳ ಸಮತೋಲನ ಆಹಾರ ಸೇವಿಸುವುದರಿಂದ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಗಿರಿಜೇಶ್ವರದೇವಿ ಹೇಳಿದರು.

ನಗರದ ಅಂಬೇಡ್ಕರ್ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣಾ ಅಭಿಯಾನ ಉದ್ಘಾಟಿಸಿ ಅವರು
ಮಾತನಾಡಿದರು.

ನಕಾರಾತ್ಮಕ ಮನೋಭಾವನೆ ತ್ಯಜಿಸಿ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಇದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿಯೊಬ್ಬರು ಹಸಿ ತರಕಾರಿ ಹೆಚ್ಚಾಗಿ ಸೇವಿಸಬೇಕು. ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯವಂತರನ್ನಾಗಿ ರೂಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ವೆಂಕಟಗಿರಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಜಂಕ್ ಫುಡ್, ಬೀದಿಬದಿ ಮಾರುವ ಆಹಾರ ಪದಾರ್ಥ ಸೇವಿಸಬಾರದು. ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಉತ್ತಮ ಆರೋಗ್ಯವಂತ ವ್ಯಕ್ತಿ ಈ ದೇಶದ ಆಸ್ತಿ. ಪೌಷ್ಟಿಕತೆ ಇರುವ ಆಹಾರ, ಹಾಲು, ಮೊಟ್ಟೆ, ಮೀನು, ತರಕಾರಿ, ಸಿರಿಧಾನ್ಯ, ಬೇಳೆಕಾಳು ಮತ್ತು ಹಣ್ಣು ಸೇವಿಸಬೇಕು. ಇದರಿಂದ ವಿಟಮಿನ್ ಕೊರತೆ ನೀಗಿಸಬಹುದು ಎಂದು ಹೇಳಿದರು.

2018ರ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜಸ್ಥಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮ ದೇಶದಾದ್ಯಂತ ಸೆಪ್ಟಂಬರ್ ತಿಂಗಳಲ್ಲಿ ಆಚರಿಸಲಾಗುತ್ತಿದೆ. ಪೋಷಕರಲ್ಲಿ ಅರಿವು ಮೂಡಿಸಲು ತಾಲ್ಲೂಕಿನ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ
ಎಂದರು.

ನಗರಸಭೆ ಸದಸ್ಯ ಪ್ರಸಾದ್, ತಾಲ್ಲೂಕು ಅನುದಾನಿತ ಶಿಕ್ಷಣಸಂಸ್ಥೆಗಳ ಅಧ್ಯಕ್ಷ ನಾರಾಯಣಸ್ವಾಮಿ, ಸಿಡಿಪಿಒ ಮಹೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಓಬಳರೆಡ್ಡಿ, ಸಂಘದ ಉಪಾಧ್ಯಕರಾದ ಆವನಿ ಕೃಷ್ಣಮೂರ್ತಿ, ಇಂತಿಯಾಜ್, ಪ್ರತಿನಿಧಿ ಜೆ.ಎಸ್. ಮಂಜುನಾಥ್, ಮುಖ್ಯಶಿಕ್ಷಕಿ ಬಿ. ವಿಜಯಲಕ್ಷ್ಮಿ, ಸಿಆರ್ಪಿಗಳಾದ ಕೃಷ್ಣಪ್ಪ, ವೆಂಕಟರಾಮ್, ಜಯಪ್ರಕಾಶ್, ಸಹಶಿಕ್ಷಕರಾದ ಕೆ. ನಾರಾಯಣಸ್ವಾಮಿ, ಕೆ. ಪ್ರವೀಣ್ ಕುಮಾರ್, ರೆಡ್ಡಮ್ಮ, ಭಾರತಿ, ವೆಂಕಟಲಕ್ಷ್ಮಮ್ಮ ಮತ್ತು ಪೋಷಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.