ಶುಕ್ರವಾರ, ಜುಲೈ 1, 2022
24 °C

ಗೋಮಾಳ ಒತ್ತುವರಿ ಗ್ರಾಮಸ್ಥರ ಜಟಾ‍ಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಗೋಮಾಳ ಜಮೀನಿನ ಒಡೆತನಕ್ಕಾಗಿ ಗ್ರಾಮಸ್ಥರು ಹೊಡೆದಾಡಿದ ಘಟನೆ ಗುರುವಾರ ಪಾರಾಂಡಹಳ್ಳಿಯ ಬಳಿಯ ಗುಟ್ಟಹಳ್ಳಿಯಲ್ಲಿ ನಡೆದಿದೆ.

ಬೇತಮಂಗಲ ಹೋಬಳಿ ಪಾರಂಡಹಳ್ಳಿ ಕಂದಾಯ ವೃತ್ತಕ್ಕೆ ಸೇರುವ ಸರ್ವೇ ನಂ. 6ರಲ್ಲಿ ಇರುವ ಗೋಮಾಳದ ಒಡೆತನಕ್ಕಾಗಿ ಎರಡು ಗುಂಪುಗಳು ಪೈಪೋಟಿ ನಡೆಸಿದ್ದವು. ಎರಡು ದಿನಗಳಿಂದ ಗೋಮಾಳ ಜಾಗವನ್ನು ಜೆಸಿಬಿ ಮೂಲಕ ಸಮತಟ್ಟು ಮಾಡುವ ಮೂಲಕ ಒಡೆತನಕ್ಕೆ ಹಕ್ಕು ಸಾಧಿಸಲು ಪ್ರಯತ್ನಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಸ್ಥಳಕ್ಕೆ ಧಾವಿಸಿದ ರಾಬರ್ಟಸನ್‌ಪೇಟೆ ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತಂದರು.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೆ.ಎನ್‌. ಸುಜಾತಾ, ಈ ಜಮೀನು ಸರ್ಕಾರಿ ಗೋಮಾಳವಾಗಿದೆ. ಅದನ್ನು ಯಾರಿಗೂ ಮಂಜೂರು ಮಾಡಿಲ್ಲ. ಒತ್ತುವರಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.