ಕೆಜಿಎಫ್: ಬೆಮಲ್ ಸಮೀಪದ ಗೋಲ್ಕುಂಡ ಶಾಫ್ಟ್ ಬಳಿ ಜಿಂಕೆ ಮರಿಯೊಂದು ರೈಲಿಗೆ ಸಿಕ್ಕು ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಬೆಳಗ್ಗೆ ಮಾರಿಕುಪ್ಪಂನಿಂದ ಬೆಂಗಳೂರಿಗೆ ಹೋಗುವ ರೈಲಿಗೆ ಜಿಂಕೆ ಮರಿ ಸಿಕ್ಕು ಹಾಕಿಕೊಂಡು, ಒಂದು ಕಾಲಿಗೆ ತೀವ್ರವಾಗಿ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಜಿಂಕೆ ಮರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ವಾಯ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಸ್ನೇಕ್ ರಾಜ ನಂತರ ಅದನ್ನು ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಡಮಾಕನಹಳ್ಳಿ ಕಾಡಿನಿಂದ ಬರುವ ಜಿಂಕೆಗಳು ಬೀದಿ ನಾಯಿಗಳಿಗೆ ಇಲ್ಲವೇ ವಾಹನಗಳಿಗೆ ಡಿಕ್ಕಿ ಹೊಡೆದು ಮೃತಪಡುವ ಘಟನೆಗಳು ನಡೆಯುತ್ತಲೇ ಇವೆ. ಕಳೆದ ಗುರುವಾರ ಸಹ ಓರಿಯಂಟಲ್ ಲೈನಿನಲ್ಲಿ ನಾಯಿ ದಾಳಿಗೆ ಸಿಕ್ಕು ಜಿಂಕೆಯೊಂದು ಮೃತಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.