ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಡಿಸಿಸಿ ಬ್ಯಾಂಕ್‌ಗೆ ಇದ್ದ ಬಾಗಿಲು ತೆರೆಯಲು ಸಮ್ಮತಿ

Last Updated 31 ಮಾರ್ಚ್ 2022, 4:07 IST
ಅಕ್ಷರ ಗಾತ್ರ

ಬಂಗಾರಪೇಟೆ: ಮಹಿಳೆಯರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಅಭಿಪ್ರಾಯ ಪಡೆದು ತಾಲ್ಲೂಕು ಕಚೇರಿ ಆವರಣದಿಂದ ಡಿಸಿಸಿ ಬ್ಯಾಂಕ್‌ ಪ್ರವೇಶಿಸಲು ಇದ್ದ ಚಿಕ್ಕ ಬಾಗಿಲು ತೆರೆಯಲಾಗಿದೆ ಎಂದು ತಹಶೀಲ್ದಾರ್ ಎಂ. ದಯಾನಂದ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಿಂದ ಡಿಸಿಸಿ ಬ್ಯಾಂಕ್‌ಗೆ ಇದ್ದ ಚಿಕ್ಕ ಪ್ರವೇಶ ಬಾಗಿಲು ಕೆಲ ವಾರಗಳ ಹಿಂದೆ ಮುಚ್ಚಲಾಗಿತ್ತು. ಈಗ ತೆರೆಯಲಾಗಿದೆ ಎಂದು ಹೇಳಿದರು.

ತಾಲ್ಲೂಕು ಕಚೇರಿ ಆವರಣದಲ್ಲಿ ವಾಹನ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು. ಕಚೇರಿ ಮುಂದೆ ಉದ್ಯಾನ ನಿರ್ಮಿಸಿ ವಾಹನ ನಿಲುಗಡೆಗೆ ವ್ಯವಸ್ಥಿತ ಸ್ಥಳ ಕಲ್ಪಿಸುವ ಉದ್ದೇಶದಿಂದ ಕಚೇರಿ ಆವರಣದಿಂದ ಡಿಸಿಸಿ ಬ್ಯಾಂಕ್‌ಗೆ ಇದ್ದ ಪ್ರವೇಶ ಬಾಗಿಲು ಮುಚ್ಚಲಾಗಿತ್ತು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರ ಮನವಿ ಮೇರೆಗೆ ಮಂಗಳವಾರದಿಂದ ತಾತ್ಕಾಲಿಕವಾಗಿ ಕಚೇರಿ ವೇಳೆಯಲ್ಲಿ ಮಾತ್ರ ಆ ಬಾಗಿಲು ತೆರೆಯಲಾಗುವುದು ಎಂದು ತಿಳಿಸಿದರು.

‘ತಾಲ್ಲೂಕು ಕಚೇರಿ ಆವರಣದಿಂದ ಡಿಸಿಸಿ ಬ್ಯಾಂಕ್‌ ತೆರಳಲು ಇದ್ದ ಬಾಗಿಲು ಮುಚ್ಚಿದ್ದರಿಂದ ಬ್ಯಾಂಕ್‌ಗೆ ತೆರಳುವ ಮಹಿಳೆಯರಿಗೆ ತೊಂದರೆ ಆಗುತ್ತಿದೆ. ಬಾಗಿಲು ತೆರೆದು ಅನುವು ಮಾಡಿಕೊಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಲಾಗಿತ್ತು. ಆರಂಭದಲ್ಲಿ ಕೆಲವು ನಿಯಮಗಳಿಗೆ ಅಂಟಿಕೊಂಡಿದ್ದ ಅವರು ಬಳಿಕ ಷರತ್ತು ವಿಧಿಸಿ ಬಾಗಿಲು ತೆರೆಯಲು ಒಪ್ಪಿದರು’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ವಿ. ಮಹೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT