ಇನ್ನೂ ಮುಗಿಯದ ವಾಕಿಂಗ್ ಟ್ರ್ಯಾಕ್: ಪುರಸಭೆ ವಿರುದ್ಧ ಜನಸಾಮಾನ್ಯರ ಆಕ್ರೋಶ
10 ವರ್ಷಗಳ ಹಿಂದೆ ಕೈಗೊಳ್ಳಲಾಗಿದ್ದ ಕಾಮಗಾರಿ
ಮಂಜುನಾಥ ಎಸ್
Published : 16 ಡಿಸೆಂಬರ್ 2024, 6:47 IST
Last Updated : 16 ಡಿಸೆಂಬರ್ 2024, 6:47 IST
ಫಾಲೋ ಮಾಡಿ
Comments
ವಾಕಿಂಗ್ ಟ್ರ್ಯಾಕ್ ಅನ್ನು ನಿರ್ಮಾಣ ಮಾಡುವ ಮೂಲಕ ಕೆರೆ ಒತ್ತುವರಿ ತಡೆಯಬಹುದು. ನಾಗರಿಕರ ಉತ್ತಮ ಆರೋಗ್ಯಕ್ಕೂ ಇದು ಸಹಕಾರಿ.
ಮಂಜುನಾಥ ಮುನಿಯಮ್ಮ ಬಡಾವಣೆ ನಿವಾಸಿ
ಪಟ್ಟಣದ ಹೃದಯ ಭಾಗದಲ್ಲಿರುವ ದೊಡ್ಡ ಕೆರೆಯಲ್ಲಿ ಸ್ಥಗಿತಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಜನರ ಉಪಯೋಗಕ್ಕೆ ಕಲ್ಪಿಸಬೇಕು
ಸುಬ್ರಮಣಿ ಸ್ಥಳೀಯ ನಿವಾಸಿ
ದೊಡ್ಡಕೆರೆಯಲ್ಲಿ ವಾಕಿಂಗ್ ಟ್ರ್ಯಾಕ್ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಈ ಮೂಲಕ ಜನಸಾಮಾನ್ಯರ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸಲಾಗುವುದು
ಸತ್ಯನಾರಾಯಣ ಪುರಸಭೆ ಮುಖ್ಯಧಿಕಾರಿ
₹3 ಕೋಟಿ ವೆಚ್ಚದ ಕಾಮಗಾರಿ
15 ವರ್ಷಗಳ ಹಿಂದೆಯೇ ಈ ಯೋಜನೆಗೆ ನಿರ್ಧರಿಸಲಾಗಿತ್ತು. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಎಸ್.ಎನ್.ನಾರಾಯಣಸ್ವಾಮಿ ಶಾಸಕರಾಗಿ ಆಯ್ಕೆಯಾದ ಬಳಿಕ ಈ ಯೋಜನೆಗೆ ಮತ್ತೆ ಮರುಜೀವ ಬಂದಿತು. ₹3 ಕೋಟಿ ವೆಚ್ಚದಲ್ಲಿ ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ದೊಡ್ಡಕೆರೆ ಸುತ್ತಲೂ 3 ಕಿಮೀ ಉದ್ದದ ಟ್ರ್ಯಾಕ್ ತಲೆ ಎತ್ತಿದೆ. ಈ ಯೋಜನೆಯಿಂದ ಕೆರೆ ಒತ್ತುವರಿ ತಡೆದಂತಾಗಿದೆ. ಕೆರೆಗೆ ಹೊಸ ಕಳೆಯೂ ಬಂದಿದೆ. ಟ್ರ್ಯಾಕ್ ಸುತ್ತಲೂ ಕಣ್ಣಿಗೆ ಮುದ ನೀಡುವ ವಿವಿಧ ಬಣ್ಣಗಳ ಅಲಂಕೃತ ಹೂವಿನ ಗಿಡಗಳು ಹಾಗೂ ವಿಶ್ರಾಂತಿ ಪಡೆಯಲು ಕುರ್ಚಿಗಳನ್ನು ಅಳವಡಿಸಿದರೆ ಯೋಜನೆ ಪೂರ್ಣವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಪುರಸಭೆ ಮಾತ್ರ ಈ ಯೋಜನೆಯನ್ನು ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ಇದರಿಂದ ಈಗಾಗಲೇ ವೆಚ್ಚ ಮಾಡಿರುವ ಹಣ ಕೆರೆಯಲ್ಲಿ ಹೋಮ ಮಾಡಿದಂತಾಗಿದೆ ಎಂಬುದು ಜನಸಾಮಾನ್ಯರ ಆಕ್ರೋಶ.