ಬೇತಮಂಗಲ: ಬಂಗಾರು ತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ನಡೆಯಿತು. ಅಪಾರ ಸಂಖ್ಯೆ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.

ಭರತ ಹುಣ್ಣಿಮೆ ಸಂದರ್ಭದಲ್ಲಿ ತೆಪ್ಪೋತ್ಸವ, ಕಲ್ಯಾಣೋತ್ಸವ ಮತ್ತು ಬ್ರಹ್ಮ ರಥೋತ್ಸವ ನಡೆಯಿತು. ಬೆಳಗ್ಗೆ ವಿವಿಧ ಪೂಜಾ ಕಾರ್ಯಕ್ರಮ ಮತ್ತು ಹೋಮ ನಡೆಯಿತು. ಶಾಸಕಿ ರೂಪಕಲಾ ಶಶಿಧರ್, ಕಂದಾಯ ಇಲಾಖೆ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳು ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು.

ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಇತರ ಪ್ರದೇಶಗಳಿಂದ ಶನಿವಾರ ರಾತ್ರಿಯೇ ಭಕ್ತರು ಕುಟುಂಬ ಸಮೇತರಾಗಿ ಬಂದು ದೇವಾಲಯದ ಆವರಣದಲ್ಲಿ ಜಾಗರಣೆ ಮಾಡಿದರು. ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಜಾಗರಣೆಗೆ ನಾಟಕ ಪ್ರದರ್ಶನ: ಶನಿವಾರ ರಾತ್ರಿ ಭಕ್ತರ ಜಾಗರಣೆಗಾಗಿ 'ತ್ರಿಜನ್ಮ ಮೋಕ್ಷ' ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಬೇತಮಂಗಲ ಪೊಲೀಸರು ಅಗತ್ಯ ಕೈಗೊಂಡಿದ್ದರು.

ಶಾಸಕಿ ರೂಪಕಲಾ ಶಶಿಧರ್, ತಹಶೀಲ್ದಾರ್ ಭರತ್, ದೇಗುಲ ಸಮಿತಿ ಮಾಜಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ, ಮುನಿರತ್ನಂ ನಾಯ್ಡು, ಅ.ಮು.ಲಕ್ಷ್ಮೀನಾರಾಯಣ್, ನವೀನ್ ರಾಮ್, ಪಾಪೇಗೌಡ, ನರಸಿಂಹಗೌಡ, ಜಯರಾಮ್ ರೆಡ್ಡಿ, ಮುಜರಾಯಿ ತಹಶೀಲ್ದಾರ್ ಶ್ರೀನಿವಾಸ್ ರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಪೇಷ್ಕಾರ್ ಸುರೇಶ್ ಬಾಬು, ಚಿನ್ನಪ್ಪ, ಸುರೇಂದ್ರಗೌಡ, ನಲ್ಲೂರು ಶಂಕರ್, ತಾ.ಪಂ ಮಾಜಿ ಅಧ್ಯಕ್ಷ ಶಂಕರಪ್ಪ, ಪ್ರಸಾದ್, ಮಂಜುನಾಥ್, ಸುಧಾಕರ್ ರೆಡ್ಡಿ, ಶ್ರೀರಾಮ್ ಗೌಡ, ವೆಂಕಟರಾಮೇಗೌಡ, ಡೈರಿ ವೆಂಕಟೇಶ್ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಬಂಗಾರು ತಿರುಪತ ಶ್ರೀ ವೆಂಕಟರಮಣ ಸ್ವಾಮಿಯ ಸನ್ನಿಧಿಯಲ್ಲಿ ಭಾನುವಾರ ಬ್ರಹ್ಮ ರಥೋತ್ಸವಕ್ಕೆ ನಿರೀಕ್ಷೆಗೂ ಮೀರಿದ ಭಕ್ತರು ಭಾಗವಹಿಸಿ ಸ್ವಾಮಿ ದರ್ಶನ ಪಡೆದುಕೊಂಡರು.

ಕೆಜಿಎಫ್ ತಾಲೂಕಿನ ಬಂಗಾರು ತಿರುಪತಿ (ಗುಟ್ಟಹಳ್ಳಿ) ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ಭರತ ಹುಣ್ಣಿಮೆಯ ಪ್ರಯುಕ್ತ ತೆಪ್ಪೋತ್ಸವ, ಸ್ವಾಮಿ ಕಲ್ಯಾಣೋತ್ಸವ ಹಾಗೂ ಬ್ರಹ್ಮ ರಥೋತ್ಸವ ನಡೆಸುವುದು ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.

ಅದೇ ರೀತಿ ಈ ವರ್ಷವೂ ಭರತ ಹುಣ್ಣಿಮೆ ಅಂಗವಾಗಿ ಶನಿವಾರ ರಾತ್ರಿ ತೆಪ್ಪೋತ್ಸವ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ಮುಗಿಸಿ ಆವರಣದಲ್ಲಿನ ಕೊಳದಲ್ಲಿ ಸ್ವಾಮಿಯನ್ನು ಪ್ರದಕ್ಷಿಣೆ ಮಾಡಲಾಯಿತು, ಕಲ್ಯಾಣೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಿ ಉತ್ಸವದಲ್ಲಿ ಮೆರವಣಿಗೆ ಮಾಡಲಾಯಿತು.

ಭಾನುವಾರ ಬೆಳಿಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಹೊಮ ಹವನಗಳು ನಡೆಸಿ 11 ಗಂಟೆ ಸುಮಾರಿಗೆ ಶಾಸಕಿ ರೂಪಕಲಾ ಶಶಿಧರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳಿಂದ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ, ಆಂಧ್ರ ಸೇರಿದಂತೆ ಇತರೆ ಕಡೆಗಳಿಂದಲೂ ಶನಿವಾರ ರಾತ್ರಿಯೇ ಭಕ್ತಾದಿಗಳು ಟ್ರಾಕ್ಟರ್, ಟೆಂಪೋಗಳಲ್ಲಿ ಕುಟುಂಬ ಸಮೇತರಾಗಿ ದೇವಾಲಯದ ಆವರಣದಲ್ಲಿ ಜಾಗರಣೆ ಮಾಡಿ ಬೆಳ್ಳೆಗ್ಗಿನ ಜಾವ ಸ್ವಾಮಿಯ ದರ್ಶನ ಪಡೆದು ಬಂದು ಬಳಗದವರಿಗೆ ಹಾಗೂ ಸಾರ್ವಜನಿಕರಿಗೆ ಅನ್ನದಾನ ಮಾಡಿದರು.

ಜಾಗರಣೆಗೆ ನಾಟಕ ಪ್ರದರ್ಶನ:

ಶನಿವಾರ ರಾತ್ರಿಯೇ ದೇವಾಲಯಕ್ಕೆ ವಿವಿಧ ಕಡೆಯಿಂದ ಬರುವ ಭಕ್ತಾದಿಗಳ ಜಾಗರಣೆಗಾಗಿ ತ್ರಿಜನ್ಮ ಮೋಕ್ಷ ನಾಟಕವನ್ನು ಏರ್ಪಡಿಸಲಾಗಿತ್ತು.

ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮ:

ಬ್ರಹ್ಮ ರಥೋತ್ಸವದ ಅಂಗವಾಗಿ ಆಗಮಿಸುವ ಸಾವಿರಾರು ಮಂದಿ ಭಕ್ತಾದಿಗಳಿಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬೇತಮಂಗಲ ಪೊಲೀಸ್ ಠಾಣೆಯ ವತಿಯಿಂದ ಆಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಈ ಬ್ರಹ್ಮ ರಥೋತ್ಸವದಲ್ಲಿ ಶಾಸಕಿ ರೂಪಕಲಾ ಶಶಿಧರ್, ತಹಸೀಲ್ದಾರ್ ಭರತ್, ದೇಗುಲ ಸಮಿತಿಯ ಮಾಜಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ, ಮುನಿರತ್ನಂ ನಾಯ್ಡು, ಅ.ಮು.ಲಕ್ಷ್ಮೀನಾರಾಯಣ್, ನವೀನ್ ರಾಮ್, ಪಾಪೇಗೌಡ, ನರಸಿಂಹ ಗೌಡ, ಜಯರಾಮ್ ರೆಡ್ಡಿ, ಮುಜರಾಯಿ ತಹಸೀಲ್ದಾರ್ ಶ್ರೀನಿವಾಸ್ ರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಪೇಷ್ಕಾರ್ ಸುರೇಶ್ ಬಾಬು, ಚಿನ್ನಪ್ಪ, ಸುರೇಂದ್ರ ಗೌಡ, ನಲ್ಲೂರು ಶಂಕರ್, ತಾಪಂ ಮಾಜಿ ಅಧ್ಯಕ್ಷ ಶಂಕರಪ್ಪ, ಪ್ರಸಾದ್, ಮಂಜುನಾಥ್, ಸುಧಾಕರ್ ರೆಡ್ಡಿ, ಶ್ರೀರಾಮ್ ಗೌಡ, ವೆಂಕಟರಾಮೇಗೌಡ, ಡೈರಿ ವೆಂಕಟೇಶ್ ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಚಿತ್ರ 03 ಬೇತಮಂಗಲ ಸಮೀಪದ ಬಂಗಾರು ತಿರುಪತಿಯಲ್ಲಿ ಭರತ ಹುಣ್ಣಿಮೆಯ ಅಂಗವಾಗಿ ಶನಿವಾರ ರಾತ್ರಿ ತೆಪ್ಪೋತ್ಸವ ಸಾವಿರಾರು ಭಕ್ತರೊಂದಿಗೆ ಭಕ್ತಿಪೂರ್ವಕವಾಗಿ ಗೋವಿಂದ ನಾಮ ಸ್ಮರಣೆಯೊಂದಿಗೆ ನಡೆಯಿತು.

ಚಿತ್ರ 04 ಬಂಗಾರು ತಿರುಪತಿಯಲ್ಲಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.