ಕೋಲಾರ: ‘ಪ್ರತಿಪಕ್ಷದವರಿಗೆ ಆರೋಪ ಮಾಡುವುದೇ ಕೆಲಸ, ಮಾಡಿಲಿ ಬಿಡಿ’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ಲೆಕ್ಕದಲ್ಲಿ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಇಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಸಚಿವರು, ‘ಸರ್ಕಾರ ಸೋಂಕಿತರ ಸಾವಿನ ಲೆಕ್ಕದಲ್ಲಿ ಸುಳ್ಳು ಮಾಹಿತಿ ನೀಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸೋಂಕಿತರು ಮತ್ತು ಸಾವಿನ ಸಂಖ್ಯೆಯ ಮಾಹಿತಿ ಪ್ರತಿ ಬಾರಿ ಪೋರ್ಟಲ್ನಲ್ಲಿ ಅಪ್ಲೋಡ್ ಆಗುತ್ತಿದೆ. ಮುಖ್ಯಮಂತ್ರಿಗಳು ರಾಜ್ಯದ ಕೋವಿಡ್ ವಾರ್ರೂಂ, ಭೌತಿಕ ಪರಿಶೀಲನೆ, ಔಷಧ ಮಾತ್ರೆ ಹಂಚಿಕೆ ಜವಾಬ್ದಾರಿ ನನಗೆ ನೀಡಿದ್ದಾರೆ. ನನ್ನ ಬಳಿ ಪ್ರತಿದಿನದ ಮಾಹಿತಿ ಇರುತ್ತದೆ’ ಎಂದು ಹೇಳಿದರು.

ಲಾಕ್ಡೌನ್ನ ಮೊದಲ ದಿನ ಪೊಲೀಸರು ಸಾರ್ವಜನಿಕರಿಗೆ ಲಾಠಿ ಏಟು ಕೊಟ್ಟು ದೌರ್ಜನ್ಯ ನಡೆಸಿದ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸರಿಯಾಗಿ ಲಾಕ್ಡೌನ್ ಜಾರಿಯಾಗದಿದ್ದರೆ ಮಾಧ್ಯಮದವರೆ ಟೀಕಿಸುತ್ತೀರಿ. ಲಾಕ್ಡೌನ್ ಜಾರಿಗೆ ಕಠಿಣ ಕ್ರಮ ಕೈಗೊಂಡರೆ ಅದನ್ನೂ ಪ್ರಶ್ನಿಸುತ್ತೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.