ಕೋಲಾರ: ಭೋವಿ ಜನಾಂಗವು ಹಿಂದಿನಿಂದಲೂ ವಿದ್ಯಾಭ್ಯಾಸದ ಕಡೆ ಗಮನ ಹರಿಸದೆ ಕಲ್ಲು, ಮಣ್ಣು, ಕೆರೆ ಕಟ್ಟೆ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದೆ. ಸಮುದಾಯದವರು ದೊಡ್ಡ ಅಧಿಕಾರಿಗಳಾಗಿದ್ದೇ ವಿರಳ. ಇನ್ನಾದರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮುಂದೆ ಬರಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯವು ಮೈಸೂರಿನ ಕೆಆರ್ಎಸ್ ಜಲಾಶಯ ನಿರ್ಮಿಸುವ ಕೆಲಸ ಸೇರಿದಂತೆ ಶಾಶ್ವತವಾಗಿ ಉಳಿಯುವಂಥ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂಥ ಸಮುದಾಯಕ್ಕೆ ಎಲ್ಲಾ ರೀತಿಯ ಸಹಾಯ ಮಾಡಬೇಕು ಎಂದರು.

ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ನರಸಾಪುರ ಬಳಿ ಕಲ್ಲಿನ ಬ್ಲಾಕ್ಗಳನ್ನು ಭೋವಿ ಸಮುದಾಯಕ್ಕೆ ಕೊಡಲು ಸೂಚನೆ ಕೊಡಬೇಕು. ಸಮುದಾಯದ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಎರಡನೇ ಹಾಗೂ ನಾಲ್ಕನೆ ಶನಿವಾರ ಅರ್ಧ ದಿವಸ ಮಾತ್ರ ಕೆಲಸ ಮಾಡಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ನೆರವು ನೀಡಲು ಸಿಎಸ್ಆರ್ ಅನುದಾನವನ್ನು ಆರೋಗ್ಯ, ಶಿಕ್ಷಣಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ‘ಇವತ್ತು ಸಮುದಾಯದ ಕಲವು ಹಿರಿಯ ನಾಯಕರು ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಚುನಾವಣೆ ಬಂದಾಗ ಹೊಡೆದಾಡೋಣ. ಆದರೆ ಸಮಾಜದ ಕಾರ್ಯಕ್ರಮದಲ್ಲಿ ಒಂದಾಗಿ ಒಗ್ಗಟ್ಟನ್ನು ಪ್ರದರ್ಶಿಸಿ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಕೆಲ ಸಮುದಾಯಗಳಲ್ಲಿ ಒಗ್ಗಟ್ಟಿನ ಕೊರತೆ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಮಾಜದ ಕುರಿತು ಜಾಗೃತಿ ಮೂಡಿಸಬೇಕು. ಕುಲಕಸುಬು ಬಿಟ್ಟು ಬೇರೆ ದಿಕ್ಕಿನಲ್ಲಿ ಆಲೋಚಿಸುವ ಅಗತ್ಯವಿದೆ. ಮಾನಸಿಕ ಗುಲಾಮಿಗಿರಿಯಿಂದ ಹೊರಬರಬೇಕಿದೆ. ಇದಕ್ಕೆ ಶಿಕ್ಷಣ ಅಗತ್ಯ, ಕೌಶಲ ಕಲಿಸಬೇಕು. ಇದು ವ್ಯವಸ್ಥೆಯ ಜವಾಬ್ದಾರಿಯಾಗಬೇಕು’ ಎಂದರು.

ಭೋವಿ ಸಮಾಜವು ಶ್ರಮ ಸಂಸ್ಕೃತಿಯಡಿ ಬರುವ ಸಮುದಾಯ. ಮನೆ ಕಟ್ಟುವ ಈ ಸಮುದಾಯಕ್ಕೆ ಆ ಮನೆಯೊಳಗೆ ಹೋಗಲು ಬಿಡಲ್ಲ. ನೀತಿ ರೂಪಿಸುವ ಮಟ್ಟಕ್ಕೆ ಈ ಸಮುದಾಯದವರು ಬೆಳೆದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ಭೋವಿ ಸಮುದಾಯ ಎಂದರೆ ಶ್ರಮಿಕ ಸಮಾಜ. ಹೆಚ್ಚು ಕೆರೆ ಇರುವ ಜಿಲ್ಲೆ ಕೋಲಾರ. ಅದಕ್ಕೆ ಕಾರಣ ಭೋವಿ ಸಮಾಜ. ಈಗ ಯಂತ್ರೋಪಕರಣಗಳು ಇದ್ದರೂ ಹೊಸದಾಗಿ ಯಾವುದೇ ಕೆರೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಬೇರೆ ರಾಜ್ಯಗಳಲ್ಲಿ ಭೋವಿ ಸಮಾಜಕ್ಕೆ ಮೀಸಲಾತಿ ಇಲ್ಲ. ಕರ್ನಾಟಕದಲ್ಲಿ ಮಾತ್ರ ಸಮಾಜಕ್ಕೆ ಮೀಸಲಾತಿ ಇದೆ’ ಎಂದರು.

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿದರು, ಉಪನ್ಯಾಸಕ ಅನಿಲ್ ಕುಮಾರ್ ವಿಶೇಷ ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮಾಜಿ ಸದಸ್ಯ ಗಣೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎ.ಅಜಯ್ ಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ಸಮುದಾಯದ ಮುಖಂಡರಾದ ಎಸ್.ವಿ.ಲೋಕೇಶ್, ಎಸ್.ಚೌಡಪ್ಪ, ನುಕ್ಕನಹಳ್ಳಿ ಶ್ರೀನಿವಾಸ್, ನಾರಾಯಣ, ಗಣೇಶ್, ಶಂಕರಪ್ಪ, ತಾರಕ್ ಮಂಜು, ಮಂಜುನಾಥ್ ಇದ್ದರು.

ಒಂದೇ ತಾಯಿ ಹೊಟ್ಟೇಲಿ ಜನಿಸಬೇಕಿತ್ತು ಕೆಲವರು ನನ್ನ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರನ್ನು ಜೋಡೆತ್ತು ಲವಕುಶ ಎನ್ನುತ್ತಾರೆ. ನಾವು ಒಂದೇ ತಾಯಿ ಹೊಟ್ಟೆಯಲ್ಲಿ ಜನಿಸಬೇಕಿತ್ತು. ಆದರೆ ವ್ಯತ್ಯಾಸವಾಗಿ ಬೇರೆ ಬೇರೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದೆವು. ನಾವು ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೇವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ಯೋಗ್ಯತೆ ಅಳೆಯಲು ಜಾತಿ ಮಾನದಂಡವಲ್ಲ

ಮಾನವ ವಿರೋಧಿ ಸಂಸ್ಕೃತಿಯಲ್ಲಿ ಯಾವುದೇ ಬೆಳವಣಿಗೆ ಪ್ರಗತಿ ಕಾಣುವುದಿಲ್ಲ. ಜಾತಿ ಎನ್ನುವುದು ನಮ್ಮ ಸಾಮರ್ಥ್ಯ ಯೋಗ್ಯತೆಯ ಅಳೆಯುವ ಮಾನದಂಡ ಅಲ್ಲ. ಅದನ್ನೆಲ್ಲಾ ದಾಟಿ ಬೆಳೆಯಲು ಆತ್ಮವಿಶ್ವಾಸ ಇರಬೇಕು. ದಮನಿತ ಸಮಾಜದ ಮುಖ್ಯ ಸಮಸ್ಯೆ ಎಂದರೆ ತಾವು ತಮ್ಮ ಕುಟುಂಬ ಮಾತ್ರ ಬೆಳೆಯಬೇಕು. ಉಳಿದವರ ಬಗ್ಗೆ ಕಾಳಜಿ ಇರಲ್ಲ. ಸಮದಾಯದ ಉಳಿದವರನ್ನೂ ತಮ್ಮ ಜೊತೆಗೆ ಕರೆದುಕೊಂಡು ಹೋಗುವ ಇಚ್ಛಾಶಕ್ತಿ ಕಳೆದು ಕೊಳ್ಳುತ್ತಿದ್ದೇವೆ. ಸ್ವಾರ್ಥ ಬಿಡಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಸಲಹೆ ನೀಡಿದರು.

ನನಗೆ ಜಾತಿ ಬಲ ಇಲ್ಲ

ನನಗೆ ಜಾತಿಯ ಬಲ ಇಲ್ಲ. ನಮ್ಮ ಸಮುದಾಯದ ಕೇವಲ 700 ವೋಟು ಇಟ್ಟುಕೊಂಡು ಏನು ಮಾಡುವುದು? ಆದರೂ ಕೋಲಾರ ಕ್ಷೇತ್ರದಲ್ಲಿ ಗೆದ್ದಿದ್ದೇನೆ. ಭೋವಿ ಸಮುದಾಯದಷ್ಟು ಬಲ ನನಗೆ ಇದ್ದಿದ್ದರೆ ಏನು ಬೇಕಾದರೂ ಮಾಡಬಹುದು ಎಂದು ಕೊತ್ತೂರು ಮಂಜುನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.