ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಗಿಗಳು ಗುರುತಿನ ಚೀಟಿ ಪಡೆಯಿರಿ

Last Updated 8 ನವೆಂಬರ್ 2021, 16:29 IST
ಅಕ್ಷರ ಗಾತ್ರ

ಕೋಲಾರ: ‘ವೃತ್ತಿನಿರತ ಬಡಗಿಗಳು ಸರ್ಕಾರದ ಸೌಲಭ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆಯಿರಿ; ಎಂದು ರಾಜ್ಯ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್‌ ಕಿವಿಮಾತು ಹೇಳಿದರು.

ತಾಲ್ಲೂಕು ಬಡಗಿಗಳ ಕ್ಷೇಮಾಭಿವೃದ್ಧಿ ಸಂಘವು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಡಗಿಗಳಿಗೆ ಸುರಕ್ಷತಾ ಸಲಕರಣೆಗಳ ಕಿಟ್ ಮತ್ತು ಗುರುತಿನ ಚೀಟಿ ವಿತರಿಸಿ ಮಾತನಾಡಿದರು.

‘ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ವತಿಯಿಂದ ನೀಡುತ್ತಿರುವ ಸೌಲಭ್ಯ ಪಡೆದುಕೊಳ್ಳಲು ಗುರುತಿನ ಚೀಟಿ ಕಡ್ಡಾಯ. ಕೋವಿಡ್ ಸಂದರ್ಭದಲ್ಲಿ ಗುರುತಿನ ಚೀಟಿ ಇಲ್ಲದೆ ಸಾವಿರಾರು ಬಡಗಿಗಳು ಸೌಲಭ್ಯಗಳಿಂದ ವಂಚಿತರಾದರು’ ಎಂದು ತಿಳಿಸಿದರು.

‘ಈಗಾಗಲೇ ನೋಂದಾಯಿತ ಕಾರ್ಮಿಕರು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಯ ₹ 3 ಸಾವಿರ ಸಿಗದೆ ಪರಿತಪಿಸುತ್ತಿದ್ದಾರೆ. ಈ ಹಣ ಬಿಡುಗಡೆಗಾಗಿ ಶಾಸಕ ಕೆ.ಶ್ರೀನಿವಾಸಗೌಡರ ನೇತೃತ್ವದಲ್ಲಿ ರಾಜ್ಯ ಕಾರ್ಮಿಕ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಬಾಕಿ ಉಳಿದಿರುವ ಪರಿಹಾರದ ಹಣ ಬಿಡುಗಡೆಗೆ ಮಾಡುವಂತೆ ಒತ್ತಾಯಿಸಲು ನಿರ್ಧರಿಸಿದ್ದೇವೆ’ ಎಂದು ವಿವರಿಸಿದರು.

‘ಕೊರೊನಾ ಸೋಂಕು ಹರಡುವಿಕೆ ತಡೆಗೆ ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂತರ ಕಾಪಾಡಬೇಕು ಮತ್ತು ಮಾಸ್ಕ್ ಬಳಸಬೇಕು. ನಗರಸಭೆಯಿಂದ ಸಿಗುವ ಸೌಲಭ್ಯ ಪಡೆಯಲು ನಮ್ಮನ್ನು ನೇರವಾಗಿ ಭೇಟಿಯಾಗಿ’ ಎಂದು ನಗರಸಭೆ ಅಧ್ಯಕ್ಷೆ ಆರ್.ಶ್ವೇತಾ ಶಬರೀಶ್‌ ಮನವಿ ಮಾಡಿದರು.

ಜಿಲ್ಲಾ ಬಡಗಿಗಳ ಸಂಘದ ಅಧ್ಯಕ್ಷ ಶೇಕ್ ಬಾಬು, ತಾಲ್ಲೂಕು ಸಂಘದ ಅಧ್ಯಕ್ಷ ಎಸ್.ಎಲ್.ವಿ.ಕುಮಾರ್, ಕಾರ್ಯದರ್ಶಿ ಮುನಿಯಪ್ಪ, ಖಜಾಂಚಿ ಫಯಾಜ್, ಪದಾಧಿಕಾರಿಗಳಾದ ಅಕ್ರಂ, ಷಫಿಉಲ್ಲಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT