ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹಕ್ಕೆ ಸಾಕ್ಷಿಯಾದ ಸಾಂತ್ವನ ಕೇಂದ್ರ

Last Updated 2 ಜುಲೈ 2021, 4:38 IST
ಅಕ್ಷರ ಗಾತ್ರ

ಬೇತಮಂಗಲ: ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಪೋಷಕರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬೇತಮಂಗಲ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಬ್ಬರು ವಿವಾಹ ಮಾಡಿಕೊಂಡಿದ್ದಾರೆ.

ನಗರದಲ್ಲಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಬುಧವಾರ ಸಾಂತ್ವನ ಕೇಂದ್ರದ ಅಧಿಕಾರಿಗಳ ಸಮ್ಮುಖದಲ್ಲಿ ಸ್ವಇಚ್ಛೆಯಿಂದ ಪ್ರೇಮಿಗಳು ವಿವಾಹವಾದರು.

ಬಂಗಾರಪೇಟೆ ತಾಲ್ಲೂಕಿನ ಬೋಯಿಸೋಣ್ಣೇನಹಳ್ಳಿ ನಿವಾಸಿಯಾದ ವೆಂಕಟೇಶಪ್ಪ ಅವರ‌ ಪುತ್ರ ಪವನ್ ಕುಮಾರ್ (28) ಮತ್ತು ಕೆಜಿಎಫ್ ತಾಲ್ಲೂಕಿನ ಘಟ್ಟಕಾಮದೇನಹಳ್ಳಿಯ ಲೇಟ್ ಮುನಿಯಪ್ಪ ಅವರ ಪುತ್ರಿ ವೇದಾವತಿ (29) ವಿವಾಹವಾದವರು. ಇಬ್ಬರು ಕೆಲಸಕ್ಕೆ ಹೋಗುವಾಗ ಪರಿಚಯವಾಗಿದೆ.

ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರ‌ ವಿರೋಧದಿಂದ ಸಾಂತ್ವನ ಕೇಂದ್ರದಲ್ಲಿ ವಿವಾಹವಾದರು.

‘ಈ ಇಬ್ಬರೂ ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವರ ಪೋಷಕರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಮ್ಮ ಕೇಂದ್ರಕ್ಕೆ ಭೇಟಿ ನೀಡಿ ಪ್ರೀತಿಯ ವಿಷಯ ತಿಳಿಸಿದ್ದಾರೆ. ಅವರನ್ನು ಈ ವಿಷಯದ ಬಗ್ಗೆ ಸಮಾಲೋಚನೆ ಮಾಡಿ ನಂತರ ಈ ಸಾಂತ್ವನ ಕೇಂದ್ರದಲ್ಲಿ ವಿವಾಹ ಮಾಡಿಸಲಾಯಿತು’ ಎಂದು ಸಿಡಿಪಿಒ ನಾಗರತ್ನಮ್ಮ‌ ತಿಳಿಸಿದರು.

ಸಾಂತ್ವನ ಕೇಂದ್ರದ ಕಾರ್ಯದರ್ಶಿ ಡಾ.ಎಂ. ಗೋಪಾಲ್, ಆಪ್ತ ಸಮಾಲೋಚಕಿ ಪವಿತ್ರಾ, ಪ್ರೇಮಿಗಳ ಬಂಧುಗಳಾದ ಚೀಮಲಬಂಡಹಳ್ಳಿ ಗೋವಿಂದರಾಜು, ಮುರಳಿ, ಕಮ್ಮಸಂದ್ರ ಆನಂದ, ನಾಗಶೆಟ್ಟಹಳ್ಳಿ ಚಂದು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT