ಶನಿವಾರ, ಮಾರ್ಚ್ 28, 2020
19 °C
ನಂಗಲಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳ ಗಣನೀಯ ಇಳಿಕೆ

ಕೊರೊನಾ ವೈರಸ್ ಭೀತಿ: ಭಣಗುತ್ತಿದೆ ಹೆದ್ದಾರಿ

ಕೆ.ತ್ಯಾಗರಾಜ್ Updated:

ಅಕ್ಷರ ಗಾತ್ರ : | |

Prajavani

ನಂಗಲಿ: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಸೃಷ್ಟಿಸಿರುವ ಭೀತಿಯಿಂದ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ವಾಹನ ಸಂಚಾರ ವಿರಳವಾಗಿದೆ.

ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ, ನಂಗಲಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆರೆಯ ಆಂದ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ಆದರೆ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನಗಳು ಕಡಿಮೆ ಆಗಿದ್ದು, ರಸ್ತೆ ಖಾಲಿ ಖಾಲಿಯಾಗಿದೆ. ಜೆಎಸ್‌ಆರ್ ಟೋಲ್ ಸಂಗ್ರಹ ಕೇಂದ್ರಗಳಲ್ಲಿಯೂ ವಾಹನಗಳಿಲ್ಲದೆ ಬಿಕೊ ಎನ್ನುತ್ತಿವೆ.

ಬೆಂಗಳೂರು, ಮಂಗಳೂರಿನಿಂದ ನಿತ್ಯ ಇದೇ ಹೆದ್ದಾರಿಯಲ್ಲಿ ವ್ಯಾಪಾರ, ವಹಿವಾಟಿಗಾಗಿ ಸಾವಿರಾರು ಟ್ರಕ್‌, ಲಾರಿಗಳು ಹೊರರಾಜ್ಯಗಳಿಗೆ ಸಂಚರಿಸುತ್ತಿದ್ದವು. ಆದರೀಗ ಯಾವುದೇ ವಾಹನಗಳಿಲ್ಲದೆ, ಗಿಜಿಗುಡುತ್ತಿದ್ದ ಹೆದ್ದಾರಿ ಸ್ತಬ್ಧವಾಗಿದೆ.

ತಮಿಳುನಾಡಿನ ಚೆನ್ನೈಗೆ ನೂರಾರು ಸಂಖ್ಯೆಯಲ್ಲಿ ತರಕಾರಿಗಳನ್ನು ಹೊತ್ತ ಲಾರಿಗಳು, ಟೆಂ‍ಪೊಗಳು ಸಂಚರಿಸುತ್ತಿದ್ದವು. ಆದರೆ ಕೊರೊನಾ ಭಯದಿಂದ ಚೆನ್ನೈಗೆ ರವಾನೆಯಾಗುವ ತರಕಾರಿ ಪ್ರಮಾಣ ಕಡಿಮೆ ಆಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ತೀರಾ ಕಡಿಮೆಯಾಗಿದೆ.

ಚೆನ್ನೈಯಲ್ಲಿನ ಹೋಂಡಾ ದ್ವಿಚಕ್ರ ಮತ್ತು ಕಾರುಗಳ ಕಾರ್ಖಾನೆಗೆ ರಾಜ್ಯದಿಂದ ರಫ್ತಾಗುತ್ತಿದ್ದ ಸಲಕರಣೆಗಳನ್ನು ಹೊತ್ತ ಲೆಕ್ಕವಿಲ್ಲದಷ್ಟು ಟ್ರಕ್‌ ಹಾಗೂ ರೈಲು ಮತ್ತು ಗಾಲಿ ಕಾರ್ಖಾನೆಗೆ ಸಲಕರಣೆಗಳನ್ನು ಸರಬರಾಜು ಮಾಡುತ್ತಿದ್ದ ಯಾವ ವಾಹನವೂ ಕಾಣಸಿಗುತ್ತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು