ಬುಧವಾರ, ಅಕ್ಟೋಬರ್ 28, 2020
29 °C

ಕೆರೆಯಲ್ಲಿ ಯುವಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ತಾಲ್ಲೂಕಿನ ಎಸ್‌.ಅಗ್ರಹಾರ ಕೆರೆಯಲ್ಲಿ ಶುಕ್ರವಾರ ಈಜಾಡಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕೋಲಾರದ ರಹಮತ್‌ನಗರ ಬಡಾವಣೆಯ ಇಮ್ರಾನ್‌ (22) ಮತ್ತು ಮಹಮ್ಮದ್‌ ನಾಜಿಬ್‌ (19) ಮೃತಪಟ್ಟವರು. ಸ್ನೇಹಿತರಾದ ಈ ಇಬ್ಬರು ಎಪಿಎಂಸಿಯ ಟೊಮೆಟೊ ಮಂಡಿಗಳಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರು.

ಶುಕ್ರವಾರ ಸಂಜೆ 4 ಗಂಟೆಗೆ ಮನೆಯಿಂದ ಹೊರಟ ಇಮ್ರಾನ್‌ ಮತ್ತು ಮಹಮ್ಮದ್‌ ನಾಜಿಬ್‌ ಅವರು ಎಸ್‌.ಅಗ್ರಹಾರ ಕೆರೆಯಲ್ಲಿ ಈಜಲು ಹೋಗಿದ್ದರು. ಇಬ್ಬರಿಗೂ ಸರಿಯಾಗಿ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆರೆಯಿಂದ ರಾತ್ರಿ ಮೃತರ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಲಾಯಿತು ಎಂದು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.