ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಉಸಿರಿಗಾಗಿ ಹಸಿರು ಟ್ರಸ್ಟ್‌ನಿಂದ ಆಯೋಜನೆ
Last Updated 1 ಜುಲೈ 2021, 5:05 IST
ಅಕ್ಷರ ಗಾತ್ರ

ಮುಳಬಾಗಿಲು: ‘ಪರಿಸರವನ್ನು ಬೆಳೆಸಿ ಪೋಷಣೆ ಮಾಡಿ ಉಳಿಸಿಕೊಳ್ಳುವ ಕಾರ್ಯ ಅಷ್ಟೊಂದು ಸುಲಭವಲ್ಲ. ಪರಿಸರ ಸಂರಕ್ಷಿಸಲು ಹೃದಯವಂತಿಕೆ ಬೇಕು’ ಎಂದು ಗ್ರಾಮ ವಿಕಾಸ ಸಂಸ್ಥೆಯ ದೊಡ್ಡ ಹೊನ್ನಶೆಟ್ಟಿಹಳ್ಳಿ ಎಂ.ವಿ.ಎನ್. ರಾವ್‌ ತಿಳಿಸಿದರು.

ತಾಲ್ಲೂಕಿನ ದೇವರಾಯಸಮುದ್ರ, ಕೀಲುಹೊಳಲಿ ಮತ್ತು ಹೊನ್ನಶೆಟ್ಟಿಹಳ್ಳಿ ‌ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಿಕ್ಕಬಳ್ಳಾಪುರದ ಉಸಿರಿಗಾಗಿ ಹಸಿರು ಟ್ರಸ್ಟ್, ಬೆಂಗಳೂರಿನ ರೋಟರಿ ಎಬಿಲಿಟೀಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಉಸಿರಿಗಾಗಿ ಹಸಿರು ಟ್ರಸ್ಟ್‌ನ ಕಾರ್ಯಕಾರಿ ಟ್ರಸ್ಟಿ ಎನ್. ಗಂಗಾಧರರೆಡ್ಡಿ ಮಾತನಾಡಿ, ಉಸಿರಿಗಾಗಿ ಹಸಿರು ಟ್ರಸ್ಟಿನ ವಿನೂತನ ಹಸಿರು ಯಜ್ಞ ಕಾರ್ಯಕ್ರಮದಡಿ ಇಲ್ಲಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಗಿಡಗಳೊಂದಿಗೆ ವಿವಿಧ ಬಗೆಯ ಹಣ್ಣು ಬಿಡುವ ಸಸಿ ನೆಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಶಾಲಾ ಆವರಣದಲ್ಲಿ ತೆಂಗು, ಮಾವು, ಹಲಸು, ನೇರಳೆ, ಕರಿಬೇವು, ನಿಂಬೆ, ಸೀಬೆ, ದಾಳಿಂಬೆ, ಚಕ್ಕೋತಾ, ಲಿಚ್ಚಿ, ರಾಮಫಲ, ಲಕ್ಷ್ಮಣಫಲ, ಕಿತ್ತಳೆ ಸೇರಿದಂತೆ ಒಟ್ಟು 100 ಸಸಿಗಳನ್ನು ಮೊದಲ ಹಂತದಲ್ಲಿ ನೆಡಲಾಗಿದೆ ಎಂದು ಹೇಳಿದರು.

ವನ್ಯಜೀವಿ ತಜ್ಞ ತ್ಯಾಗರಾಜ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹಸಿರೀಕರಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಧನಿ ಸಂಸ್ಥೆಯ ಪದಾಧಿಕಾರಿ ಸಿದ್ದಯ್ಯ, ಯುವ ಮುನ್ನಡೆ ತಂಡದ ರಿಯಾಜ್ ಹಾಗೂ ಎಲ್ಲಾ ಸಂಸ್ಥೆಗಳ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT