ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ ಹಗ್ಗಕ್ಕೆ ಸಿಲುಕಿ ಡಿವೈಎಸ್‌ಪಿಗೆ ಗಾಯ

Last Updated 13 ಫೆಬ್ರವರಿ 2022, 20:51 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನ ದೋಣಿಮೊಡಗು ಪಂಚಾಯಿತಿ ವ್ಯಾಪ್ತಿಯ ತನಿಮೊಡಗು ಗ್ರಾಮದ ಸಂಕ್ರಾಂತಿ (ರಾಸುಗಳಿಗೆ ಕಿಚ್ಚು ಹಾಯಿಸುವ) ಹಬ್ಬದಂದು ಪೊಲೀಸ್ ಬಂದೋಬಸ್ತ್ ವೀಕ್ಷಣೆಗೆ ಅಲ್ಲಿಗೆ ತೆರಳಿದ್ದ ಡಿವೈಎಸ್ಪಿ ಮುರಳೀಧರ ಅವರ ಕಾಲು ಎತ್ತಿನ ಹಗ್ಗಕ್ಕೆ ಸಿಲುಕಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಎತ್ತಿನ ಹಗ್ಗ ಸುತ್ತಿಕೊಂಡು ಕೆಳಗೆ ಬಿದ್ದ ಡಿವೈಎಸ್ಪಿ ಅವರಿಗೆ ಸ್ವಲ್ಪಹೊತ್ತು ಪ್ರಜ್ಞೆ ತಪ್ಪಿತ್ತು. ಕೂಡಲೆ ಅವರನ್ನು ಆಂಧ್ರಪ್ರದೇಶದ ಪಿಇಎಸ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಂಕ್ರಾಂತಿ ಹಬ್ಬ ಆಚರಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ತನಿಮೊಡುಗು ಗ್ರಾಮಸ್ಥರು ಕಾಮಸಮುದ್ರ ಠಾಣೆಗೆ ಮನವಿ ಸಲ್ಲಿಸಿದ್ದರು. ರಾಸುಗಳಿಗೆ ಪೂಜೆ ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದ ಪೊಲೀಸರು ಎತ್ತುಗಳ ಓಟಕ್ಕೆ ಅವಕಾಶ ಕೊಟ್ಟಿರಲಿಲ್ಲ. ಜಲ್ಲಿಕಟ್ಟು ನಡೆಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪೋಸ್ಟ್ ಮಾಡಿದ್ದು, ಮುನ್ನೆಚ್ಚರಿಕೆಯಾಗಿ ಭಾನುವಾರ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT