ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಉಪ ಚುನಾವಣೆ ಘೋಷಣೆ

Last Updated 14 ಮೇ 2019, 15:33 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಸದಸ್ಯರ ಮರಣ ಹಾಗೂ ರಾಜೀನಾಮೆಯಿಂದ ತೆರವಾಗಿರುವ ಸದಸ್ಯ ಸ್ಥಾನಗಳ ಉಪ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಮಾಲೂರು ತಾಲ್ಲೂಕಿನ ತೊರ್ನಹಳ್ಳಿ ಗ್ರಾ.ಪಂನ ತೊರ್ನಹಳ್ಳಿ ಮತ್ತು ಪ್ರಾದೇಶಿಕ ಕ್ಷೇತ್ರದ ಸದಸ್ಯ ಸ್ಥಾನಕ್ಕೆ (ಸಾಮಾನ್ಯ) ಉಪ ಚುನಾವಣೆ ನಡೆಯಲಿದೆ. ಅದೇ ರೀತಿ ಬಂಗಾರಪೇಟೆ ತಾಲ್ಲೂಕಿನ ದೊಡ್ಡೂರು ಕರಪ್ಪನಹಳ್ಳಿ ಗ್ರಾ.ಪಂ ವ್ಯಾಪ್ತಿಯ ದಾಸರಹೊಸಹಳ್ಳಿ ಮತ್ತು ಪ್ರಾದೇಶಿಕ ಕ್ಷೇತ್ರ (ಸಾಮಾನ್ಯ), ಘಟ್ಟಮಾದಮಂಗಲ ಗ್ರಾ.ಪಂನ ಕೆಂಪಾಪಪುರ ಚುನಾವಣಾ ಕ್ಷೇತ್ರ (ಸಾಮಾನ್ಯ) ಚುನಾವಣೆ ನಡೆಯಲಿದೆ.

ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಗ್ರಾ.ಪಂ ವ್ಯಾಪ್ತಿಯ ತಿಮ್ಮನಾಯಕನಹಳ್ಳಿ ಪ್ರಾದೇಶಿಕ ಕ್ಷೇತ್ರ (ಸಾಮಾನ್ಯ), ಮೋತಕಪಲ್ಲಿ ಗ್ರಾ.ಪಂನ ಆಚಂಪಲ್ಲಿ ಪ್ರಾದೇಶಿಕ ಕ್ಷೇತ್ರ (ಸಾಮಾನ್ಯ), ಶ್ರೀನಿವಾಸಪುರ ತಾಲ್ಲೂಕಿನ ಹೊದಲಿ ಗ್ರಾ.ಪಂ ವ್ಯಾಪ್ತಿಯ ಗೋಪಾಲಪುರ ಪ್ರಾದೇಶಿಕ ಕ್ಷೇತ್ರಕ್ಕೆ (ಪರಿಶಿಷ್ಟ ಪಂಗಡ ಚುನಾವಣೆ ನಡೆಯಲಿದೆ.

ಉಮೇದುವಾರಿಕೆ ಸಲ್ಲಿಸಲು ಮೇ 16 ಕಡೆಯ ದಿನ. ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮೇ 20 ಕೊನೆಯ ದಿನ. ಮೇ 29ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯುತ್ತದೆ. ಮೇ 31ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT