ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ | ಕಾಡಾನೆ ದಾಳಿ: ರೈತರ ಬೆಳೆ ನಾಶ

Published 6 ಮೇ 2024, 15:03 IST
Last Updated 6 ಮೇ 2024, 15:03 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಸಾಕರಸನಹಳ್ಳಿ ಮತ್ತೆ ಕಾಡಾನೆ ದಾಳಿ ನಡೆಸಿ ಬೆಳೆ ನಾಶಪಡಿಸಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಪೊಲೇನಹಳ್ಳಿ ಗ್ರಾಮದ ರೈತ ನಾರಾಯಣಪ್ಪರನ್ನು ತುಳಿದು ಬಲಿ ಪಡೆದ ನಂತರ ಈ ಭಾಗದಲ್ಲಿ ಕಾಡಾನೆ ಕಾಣಿಸಿಕೊಂಡಿರಲಿಲ್ಲ. ಈ ಮತ್ತೆ ಎರಡು ದಿನಗಳಿಂದ ಸಾಕರಸನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕದ ಛಾಯೆ ಮೂಡಿದೆ.

ಭಾನುವಾರ ರಾತ್ರಿ ಸಾಕರಸನಹಳ್ಳಿಯಲ್ಲಿ ಕಾಡಾನೆ ದಾಳಿ ನಡೆಸಿದ್ದು, ಮುನಿಸ್ವಾಮಪ್ಪ ಎಂಬುವರ ಹೊಲದಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ನಾಶಪಡಿಸಿದೆ. ಜತೆಗೆ ಸೀತ ಭೈರಪ್ಪನವರ ತೆಂಗಿನ ಗಡಿ ಹಾಗೂ ಮುರಳಿ, ರಾಜಪ್ಪ ಅವರ ಹುಲ್ಲು ಬೆಳೆಯನ್ನೂ ನಾಶಪಡಿಸಿದೆ. ಇದರಿಂದ ಬರಗಾಲದಲ್ಲಿ ಬೆಳೆದಿದ್ದ ಬೆಳೆ ಫಸಲು ಬರುವ ಮುನ್ನಾವೇ ನಾಶವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ನಿತ್ಯ ರಾತ್ರಿ ಗಸ್ತು ತಿರುಗಿ ಆನೆಗಳನ್ನು ತಮಿಳುನಾಡು ಅಥವಾ ಆಂಧ್ರಪ್ರದೇಶದ ಕಡೆ ಓಡಿಸಲು ಮುಂದಾಗಿದ್ದಾರೆ. ಆದರೆ, ಆ ಕಡೆಯಿಂದ ಮತ್ತೆ ರಾಜ್ಯದತ್ತ ಹಿಮ್ಮಟ್ಟಿಸುತ್ತಿರುವುದು ಈ ಸಮಸ್ಯೆ ಕಾರಣವಾಗಿದೆ. ಕಾಡಾನೆಗಳ ಹಾವಳಿಯಿಂದ ರೈತರು ವ್ಯವಸಾಯವನ್ನೇ ಕೈಬಿಡುವ ಹಂತಕ್ಕೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT