ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಮನ ಹಬ್ಬಕ್ಕೆ ಅದ್ದೂರಿ ಸಿದ್ಧತೆ

ಇಂದಿನಿಂದ ಒಂಬತ್ತು ದಿನ ರತಿ, ಮನ್ಮಥರ ಕತೆ ಅನಾವರಣ
ವಿ ರಾಜಗೋಪಾಲ್
Published 17 ಮಾರ್ಚ್ 2024, 6:29 IST
Last Updated 17 ಮಾರ್ಚ್ 2024, 6:29 IST
ಅಕ್ಷರ ಗಾತ್ರ

ಮಾಲೂರು: ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಧರ್ಮರಾಯಸ್ವಾಮಿ ಕಾಮನ ಸಮಿತಿ ವಿಜೃಂಭಣೆಯಿಂದ ಸಂಪ್ರದಾಯಕವಾಗಿ ಕಾಮನ ಹಬ್ಬವನ್ನು ಆಚರಿಸುತ್ತಾ ಬರುತ್ತಿದೆ.

ಈಗಾಗಲೇ ರತಿ ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲು ಸಿದ್ಧತೆ ನಡೆಯುತ್ತಿದ್ದು, ಮಾರ್ಚ್‌ 17 ರಿಂದ 9 ದಿನಗಳ ಕಾಲ ನಡೆಯುತ್ತದೆ. ಪಟ್ಟಣದ ಧರ್ಮರಾಯಸ್ವಾಮಿ ದೇಗುಲದ ಮುಂಭಾಗದಲ್ಲಿರುವ ರಂಗ ಮಂದಿರದಲ್ಲಿ ರತಿ ಮನ್ಮಥ ಮತ್ತು ಪರಶಿವನ ಆಳೇತ್ತರದ ಸುಂದರವಾದ ಮರದ ವಿಗ್ರಹಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಪ್ರತಿ ದಿನ ಸನ್ನಿವೇಶಕ್ಕೆ ತಕ್ಕಂತೆ ಅಲಂಕರಿಸಲಾಗುವುದು. 

ಫಾಲ್ಗುಣ ಮಾಸದ ಹುಣ್ಣಿಮೆ ದಿನವನ್ನು ಕಾಮವನ್ನು ಹಬ್ಬ ಎಂದು ಆಚರಿಸಲಾಗುತ್ತದೆ. ಈ ದಿನದಂದು ಶಿವನು ತನ್ನ ಮೂರನೇ ಕಣ್ಣಿನ ಬೆಂಕಿಯಿಂದ ಪ್ರೀತಿಯ ದೇವರು, ಕಾಮ ಅಥವಾ ಮನ್ಮಥನನ್ನು ಸುಟ್ಟು ಹಾಕಿದನು ಎಂಬ ಪ್ರತೀತಿ ಇದೆ. ತನ್ನ ಕಣ್ಣು ತೆರೆದ ನಂತರ ಶಿವನು ಪಾರ್ವತಿಯನ್ನು ನೋಡಿ ಪ್ರೀತಿಸಿ ನಂತರ ಅವರನ್ನೇ ಮದುವೆಯಾದನು. ಶಿವ ಮತ್ತು ಪಾರ್ವತಿಯರ ವಿವಾಹ ಮತ್ತು ಷಣ್ಮುಖನ ಜನನದಿಂದ ಕಾಕಾಸುರನ ಸಂಹಾರ ನಡೆಯಿತು ಎಂಬುವುದು ಪುರಾಣವಿದೆ.

ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಕರಗ ಮಹೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇದರ ಜತೆಗೆ ಕಾಮನ ಹಬ್ಬ ಆಚರಿಸಲಾಗುತ್ತಿದೆ.

ಸಿದ್ಧತೆ: ಮಾರ್ಚ್ 17ರಂದು ಆರಂಭವಾಗುವ ಕಾಮನ ಹಬ್ಬಕ್ಕೆ ಶನಿವಾರ ಪಟ್ಟಣದ ರಂಗಮಂದಿರದಲ್ಲಿ ಸಿದ್ಧತೆಗಳು ಆರಂಭವಾಗಿವೆ. ರತಿ ಮನ್ಮಥ ಹಾಗೂ ಶಿವನ ಪ್ರತಿಮೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಉಡುಗೆ ತೊಡುಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ರಂಗಮಂದಿರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ.

ಪತ್ರಿ ದಿನ ಸಂಜೆ ಪಟ್ಟಣದ ಧರ್ಮರಾಯಸ್ವಾಮಿ ರಂಗ ಮಂದಿರದಲ್ಲಿ ರತಿ ಮನ್ಮಥರನ್ನು ಕುರಿಸುವ ಮೂಲಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜತೆಗೆ ರತಿ ಮನ್ಮಥರ ಕತೆ ಹೇಳಲಾಗುತ್ತದೆ. ಮೊದಲನೇ ದಿನ ರತಿ ಮನ್ಮಥರ ವಿಗ್ರಹಗಳನ್ನು ವಧು ವರರಂತೆ ನಿಲ್ಲಿಸಲಾಗುವುದು. ಎರಡನೇ ದಿನ ಆರತಕ್ಷತೆ, ಮೂರನೇ ದಿನ ಉಯ್ಯಾಲೆಯಲ್ಲಿ ಕುರಿಸುವುದು. ನಾಲ್ಕನೇ ದಿನ ದೋಣಿಯಲ್ಲಿ, ಕಾಡಲ್ಲಿ  ಓಡಾಡಿಸುವುದು, ಶಿವ ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಡುವುದು ಹೀಗೆ ಪುರಾಣದ ರತಿ ಮನ್ಮಥರ ಕತೆಯನ್ನು ಸಾರ್ವಜನಿಕರಿಗೆ ತಿಳಿಸುವುದು.

ರತಿ ಮನ್ಮಥರು ಕುದುರೆ ಸವಾರಿ ನಡೆಸುತ್ತಿರುವ ದೃಶ್ಯ 
ರತಿ ಮನ್ಮಥರು ಕುದುರೆ ಸವಾರಿ ನಡೆಸುತ್ತಿರುವ ದೃಶ್ಯ 

ಮನರಂಜನೆ ಜತೆ ಮನ್ಮಥರ ಕತೆ 

ಧರ್ಮರಾಯ ದೇವಾಲಯ ಸಮಿತಿ ಹಿರಿಯರಿಂದ ಕಾಮನ ಹಬ್ಬವನ್ನು ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತುದೆ. ಅವರ ಹಾದಿಯಲ್ಲಿ ಕಾಮನ ಹಬ್ಬ ನಡೆದುಕೊಂಡು ಬರುತ್ತಿದೆ. ಪತ್ರಿ ದಿನ ಸಂಜೆ ಪಟ್ಟಣದ ಧರ್ಮರಾಯಸ್ವಾಮಿ ರಂಗ ಮಂದಿರದಲ್ಲಿ ರತಿ ಮನ್ಮಥರನ್ನು ಕುರಿಸುವ ಮೂಲಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಗರಿಕರಿಗೆ ಮನರಂಜನೆ ಜತೆಗೆ ರತಿ ಮನ್ಮಥರ ಕತೆ ತಿಳಿಸಲಾಗುವುದು. ಕೃಷ್ಣಪ್ಪ ಧರ್ಮರಾಯಸ್ವಾಮಿ ದೇವಾಲಯ ಸಮಿತಿ ಹಿರಿಯ ಕಾರ್ಯದರ್ಶಿ ===== ಕತೆ ಹೇಳುವ ವೇದಿಕೆ ಸಜ್ಜು  ಕಾಮನ ಹಬ್ಬ ಆಚರಣೆಗೆ ಎರಡ್ಮೂರು ದಿನಗಳಿಂದ ರತಿ ಮನ್ಮಥರ ವಿಗ್ರಹ ಶಿವ ಪಾರ್ವತಿ ವಿಗ್ರಹ ಹಾಗೂ ಅಗತ್ಯವಿರುವ ಬಟ್ಟೆ ಕಿರೀಟ ಆಭರಣ ಮತ್ತು ಬಿಲ್ಲು ಬಾಣಗಳನ್ನು ಸಿದ್ಧಪಡಿಸಲಾಗುತ್ತದೆ. ಭಾನುವಾರ ಸಂಜೆ 4ರಿಂದ ರತಿ ಮನ್ಮಥರ ಪ್ರಯಣಯದ ಕತೆಯನ್ನು ಸಾರ್ವಜನಿಕರ ಮುಂದೆ ಇಡಲು ವೇದಿಕೆ ಸಜ್ಜುಗೊಳ್ಳುತ್ತಿದೆ. ಸಜ್ಜುಗೊಳಿಸಲಾಗುತ್ತಿದೆ. ವೆಂಕಟೇಶ್ ಕಾಮನ ಸಮತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT