ಮಂಗಳವಾರ, ಅಕ್ಟೋಬರ್ 4, 2022
25 °C

ಹೂವಳ್ಳಿ ಹಾಲಿನ ಡೇರಿಯಲ್ಲಿ ಹೊಡೆದಾಟ: ಮೂವರಿಗೆ ಚೂರಿ ಇರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಳ್ಳಿ (ಕೋಲಾರ): ಹಾಲಿನ ಗುಣಮಟ್ಟ ವಿಚಾರವಾಗಿ ತಾರತಮ್ಯ ನಡೆಯುತ್ತಿದೆ ಎಂದು ಗ್ರಾಮದ ಹಾಲಿನ ಸಹಕಾರ ಸಂಘದಲ್ಲಿ ಕಾಂಗ್ರೆಸ್‌ ಮುಖಂಡರು ಮತ್ತು ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಬಣದವರು ಎನ್ನಲಾದ ವ್ಯಕ್ತಿಗಳ ನಡುವೆ ಗುರುವಾರ ಬೆಳಿಗ್ಗೆ ಹೊಡೆದಾಟ ನಡೆದಿದ್ದು, ಚೂರಿಯಿಂದ ಇರಿತಕ್ಕೆ ಒಳಗಾಗಿರುವ ವಿಠೋಬ ಎಂಬುವರ ಸ್ಥಿತಿ ಗಂಭೀರವಾಗಿದೆ.

ಪಾಂಡುರಂಗ, ಸುಬ್ರಮಣಿ ಎಂಬುವರಿಗೂ ಗಾಯಗಳಾಗಿದ್ದು, ಮೂವರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಾಗಿಸಿದೆ. ವಿಠೋಬ ಅಪಾಯದಿಂದ ಪಾರಾಗಿದ್ದಾರೆ. ಇವರು ಕಾಂಗ್ರೆಸ್‌ನಲ್ಲಿ ಗುರುತಿಸಿ ಕೊಂಡಿದ್ದರು. ವಿಠೋಬ ಎಂಬುವರು ಬೆಳಿಗ್ಗೆ ಹಾಲು ತಂದಾಗ ಡೇರಿ ನಿರ್ದೇಶಕ ಮಂಜುನಾಥ್, ಹೂವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿಗೆ ನೀಡಿದ್ದಾರೆ. ಹಾಲಿನ ಗುಣಮಟ್ಟ ಸರಿ ಇಲ್ಲ ಎಂದು ಮಂಜುನಾಥ್‌ ಹೇಳಿದ್ದಕ್ಕೆ ಮಾತಿನ ಚಕಮಕಿ ಆರಂಭವಾಗಿ ಘರ್ಷಣೆ ನಡೆದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವರ್ತೂರು ಪ್ರಕಾಶ್ ಬೆಂಬಲಿಗರು ಎನ್ನಲಾದ ಮಂಜುನಾಥ್, ರಂಗಪ್ಪ, ವೇಣು, ಗೋಪಾಲ ಎಂಬುವರನ್ನು ವಶಕ್ಕೆ ಪಡೆದಿದಿದ್ದಾರೆ. ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

ದೊಣ್ಣೆ ಮತ್ತು ಚಾಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

‘ಘಟನೆ ಖಂಡನೀಯ. ಮೂರು ವರ್ಷದಿಂದ ಹಾಲು ಉತ್ಪಾದಕರ ಮೇಲೆ ಯಾವುದೇ ದೂರುಗಳು ಇರಲಿಲ್ಲ. ಆದರೆ, ಈಗ ರಾಜಕೀಯ ದುರುದ್ದೇಶದಿಂದ ಈ ಕೃತ್ಯ ನಡೆದಿದೆ’ ಎಂದು ಡೇರಿ ನಿರ್ದೇಶಕ, ಡಿಎಸ್‌ಎಸ್‌ ಜಿಲ್ಲಾ ಅಧ್ಯಕ್ಷ ಹೂವಳ್ಳಿ ಸಿ. ನಾಗೇಶ್‌ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು