ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ 1 ಮತ್ತು 2ರ ಅರಣ್ಯ ಜಮೀನಿನ ಜಂಟಿ ಸಮೀಕ್ಷೆ ವರದಿ ಸಲ್ಲಿಕೆ ನಂತರ ಮುಂದಿನ ಕ್ರಮಕ್ಕಾಗಿ ಮೇಲ್ಮನವಿ ಪ್ರಾಧಿಕಾರದಿಂದ ಮೇಲ್ಮನವಿ ವಿಚಾರಣೆಯನ್ನು ಜ.27ರಂದು ಸಂಜೆ 4 ಗಂಟೆಗೆ ನಿಗದಿ ಮಾಡಲಾಗಿದೆ.

ವಿಚಾರಣೆಗೆ ಹಾಜರಾಗುವಂತೆ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹಾಗೂ ಶ್ರೀನಿವಾಸಪುರ ವಲಯದ ಅರಣ್ಯಾಧಿಕಾರಿಗೆ ಬೆಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿಯು (ಪ್ರಾದೇಶಿಕ) ನೋಟಿಸ್ ನೀಡಿದ್ದಾರೆ.

ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯು 64 ಎ ಪ್ರೋಸೀಡಿಂಗ್ಸ್ ಅಡಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಹೈಕೋರ್ಟ್ ಸೂಚನೆ ಮೇರೆಗೆ ರಮೇಶ್ ಕುಮಾರ್ ಉಪಸ್ಥಿತಿಯಲ್ಲೇ 2025ರ ಜ.15 ಹಾಗೂ 16ರಂದು ಜಂಟಿ ಸಮಿಕ್ಷೆ ನಡೆದಿತ್ತು. ಸರ್ವೆಗೆ ಪ್ರತಿವಾದಿಯಾಗಿದ್ದ ಅವರೂ ಸಹಕರಿಸಿದ್ದರು. ನಂತರ ವರದಿ ಸಲ್ಲಿಕೆ ಮಾಡಲಾಗಿತ್ತು.

‘ನಾನು ಜಮೀನು ಖರೀದಿ ಮಾಡಿದ್ದೇನೆಯೇ ಹೊರತು ಒತ್ತುವರಿದಾರ ಅಲ್ಲ’ ಎಂಬುದಾಗಿ ರಮೇಶ್ ಕುಮಾರ್ ಹಲವಾರು ವೇದಿಕೆಗಳಲ್ಲಿ ಹೇಳುತ್ತಾ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.