ಕೋಲಾರ: ಸರ್ಕಾರದಿಂದ ಬಾಕಿ ಹಣ ಬಾರದ ಕಾರಣ ನಗರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಯಲ್ಲಿ ಸ್ಥಗಿತಗೊಂಡಿದ್ದ ಉಚಿತ ಸ್ಕ್ಯಾನಿಂಗ್ ಸೇವೆ ಐದು ದಿನಗಳ ಬಳಿಕ ಮಂಗಳವಾರ ಪುನರಾರಂಭವಾಗಿದೆ.

ಆಸ್ಪತ್ರೆಗೆ ಸ್ಕ್ಯಾನಿಂಗ್ ಸೌಲಭ್ಯದ ಹೊರಗುತ್ತಿಗೆ ಕಲ್ಪಿಸಿರುವ ಕ್ರಸ್ನಾ ಡಯಾಗ್ನೋಸ್ಟಿಕ್ ಸಂಸ್ಥೆಯವರು ನ್ಯಾಷನಲ್ ಹೆಲ್ತ್ ಮಿಷನ್ನಿಂದ (ಎನ್ಎಚ್ಎಂ) ಬಾಕಿ ಹಣ ಬಂದಿಲ್ಲ ಎಂಬ ಕಾರಣ ಫೆ.18ರಿಂದಲೇ ಉಚಿತ ಸೇವೆ ಸ್ಥಗಿತಗೊಳಿಸಿದ್ದರು. ಹಣ ನೀಡಿದರೆ ಮಾತ್ರ ಸೇವೆ ನೀಡುವುದಾಗಿ ಹೇಳಿದ್ದರು. ಅಲ್ಲಿಯವರೆಗೆ ರೋಗಿಗಳಿಗೆ ಉಚಿತ ಸೇವೆ ಸಿಗುತಿತ್ತು.

ಸಿ.ಟಿ ಸ್ಕ್ಯಾನಿಂಗ್, ಎಂಆರ್ಐ ಸ್ಕ್ಯಾನಿಂಗ್ಗೆಂದು ಬಂದ ರೋಗಿಗಳು ಹಾಗೂ ಅವರ ಸಂಬಂಧಿಕರು, ಸಂಸ್ಥೆಯವರು ಹಣ ಕೇಳಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿರುವ ಬಗ್ಗೆ ಫೆ.19 ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.

ಮೂರ್ನಾಲ್ಕು ವರ್ಷಗಳಿಂದ ರಾಜ್ಯದಾದ್ಯಂತ ಸರ್ಕಾರ ಉಳಿಸಿಕೊಂಡಿರುವ ₹ 140 ಕೋಟಿ ಬಾಕಿ ಹಣ ನೀಡಿದರೆ ಸೇವೆ ಮುಂದುವರಿಸುವುದಾಗಿ ಸಂಸ್ಥೆಯವರು ಹೇಳಿದ್ದರು. ಈ ವಿಚಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವರೆಗೆ ತಲುಪಿತ್ತು. ಈಗ ವ್ಯವಸ್ಥೆ ಸರಿ ಹೋಗಿದ್ದು, ರೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ರೋಗಿಗಳ ಆಕ್ರೋಶದಿಂದ ಎಚ್ಚೆತ್ತ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಬಡ ರೋಗಿಗಳಿಗೆ ಕಲ್ಪಿಸಿಕೊಡುವಂತೆ ಕೋಲಾರ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದರಂತೆ ಅಧಿಕಾರಿಗಳು ಕೋಲಾರ ಹೊರವಲಯದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸುವ ವ್ಯವಸ್ಥೆ ಕಲ್ಪಿಸಿದ್ದರು.

ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಸ್ನಾ ಡಯಾಗ್ನೋಸ್ಟಿಕ್ ಸಂಸ್ಥೆಯ ಜೊತೆ ಸಭೆ ಕೂಡ ನಡೆಸಿದ್ದರು. ಬಾಕಿ ಹಣವನ್ನು ಹಂತ ಹಂತವಾಗಿ ನೀಡುವ ಭರವಸೆಯನ್ನು ಸರ್ಕಾರ ನೀಡಿದ ಹಿನ್ನೆಲೆಯಲ್ಲಿ ಸಂಸ್ಥೆಯವರು ಎಂದಿನಂತೆ ಉಚಿತ ಸ್ಕ್ಯಾನಿಂಗ್ ಸೇವೆ ಪುನರಾರಂಭಿಸಿದ್ದಾರೆ. ರೋಗಿಗಳು ಒಬ್ಬೊಬ್ಬರಾಗಿ ಸ್ಕ್ಯಾನಿಂಗ್ ಘಟಕದತ್ತ ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.