ಬೇತಮಂಗಲ: ಸಮೀಪದ ಮೇಲಪಲ್ಲಿ ಗಂಗಮಾಂಭ ದೇವಿ ಜಾತ್ರೆ ಅಂಗವಾಗಿ ಭಾನುವಾರ ರಥೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಜಾತ್ರೆ ಅಂಗವಾಗಿ ಮೇಲುಪಳ್ಳಿ ಗ್ರಾಮದಿಂದ ಶ್ರೀನಿವಾಸಂದ್ರದವರೆಗೂ ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇಗುಲವನ್ನು ತಳಿರು ತೋರಣ, ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ರಥೋತ್ಸವಕ್ಕೆ ಶಾಸಕಿ ಎಂ.ರೂಪಕಲಾ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಭಕ್ತರು ರಥಕ್ಕೆ ಬಾಳೆಹಣ್ಣು ಅರ್ಪಿಸುವ ಮೂಲಕ ತಮ್ಮ ಹರಿಕೆ ತೀರಿಸಿದರು.

ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದವರು, ಆಂಧ್ರಪ್ರದೇಶದವರು ಆಗಮಿಸಿದ್ದರು. ಜೊತೆಗೆ ಬೆಳಗ್ಗೆಯಿಂದ ಸಂಜೆವರೆಗೂ ಅನ್ನಸಂತರ್ಪಣೆ ನೆರವೇರಿತು.

ಭಾನುವಾರ ರಾತ್ರಿ ಅಮ್ಮನವರ ತುಲಾಭಾರ ಸಂಭ್ರಮದಿಂದ ನೆರವೇರಿತು. ನೂರಾರು ಭಕ್ತರು ಆಗಮಿಸಿದ್ದರು. ಜ.25 ರಂದು ಪುಷ್ಪ ಪಲ್ಲಕ್ಕಿ, 26ರಂದು ಹಸಿ ಕರಗ, ಅಗ್ನಿಕುಂಡ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

ರಾಧಾಕೃಷ್ಣಾರೆಡ್ಡಿ, ಜಯಪ್ರಕಾಶ್ ನಾಯ್ಡು, ಪದ್ಮನಾಭ ರೆಡ್ಡಿ, ರಾಮಪ್ಪ, ರವಿಚಂದ್ರ, ವೆಂಕಟೇಶಪ್ಪ, ಕದಿರಪ್ಪ, ಭಾಸ್ಕರ್, ಮನೋಹರ್, ರಾಜೇಂದ್ರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.