ಬಂಗಾರಪೇಟೆ: ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಜಯಂತಿ ಆಚರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಗುರುಮೂರ್ತಿ ಮಾತನಾಡಿ, ‘ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ವಚನ ಸಾಹಿತ್ಯದ ಸಂಶೋಧನೆ ಮತ್ತು ಪ್ರಕಟಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ವಚನ ಸಾಹಿತ್ಯದ ಪಿತಾಮಹ ಎಂದೇ ಪ್ರಖ್ಯಾತರಾಗಿದ್ದಾರೆ’ ಎಂದು ಹೇಳಿದರು.

ಹಳಕಟ್ಟಿ ಅವರು ವೃತ್ತಿಯಿಂದ ವಕೀಲರಾಗಿ ಶಿಕ್ಷಣ, ಸಹಕಾರ, ಕೃಷಿ, ವಚನ ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿದ್ದರು. ಮಹಿಳೆಯರ ಸಂಘಟನೆಗಾಗಿ ಅಕ್ಕಮಹಾದೇವಿ ಬಳಗ ಪ್ರಾರಂಭಿಸಿದ ಹಳಕಟ್ಟಿ ಅವರು, ರೈತರ ಬದುಕು ಹಸನಾಗಿಸಲು ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡಿದರು. ಈ ಮೂಲಕ ರೈತರ ಆರ್ಥಿಕ ಪ್ರಗತಿಗೆ ಕಾರಣೀಭೂತರಾದರು ಎಂದು ಹೇಳಿದರು.

ಕರ್ನಾಟಕ ಏಕೀಕರಣ ಚಳವಳಿಯಲ್ಲಿ ತಮ್ಮ ಸಹಪಾಠಿ ಪುರೋಹಿತ ಆಲೂರು ವೆಂಕಟರಾಯರ ಜತೆಗೂಡಿ ಕನ್ನಡ ಸೇವೆಗೆ ನಿರತರಾಗಲು ಶಿವಾನುಭವ ಎಂಬ ಮಾಸಿಕ ಪತ್ರಿಕೆ ಹೊರತಂದರು. ಅದು ವಚನ ಸಾಹಿತ್ಯದ ಪ್ರಚಾರಕ್ಕೆ ಬಹಳ ಸಹಕಾರಿಯಾಯಿತು. ಅವರ ಶ್ರಮದಿಂದಾಗಿ ವಚನ ಸಾಹಿತ್ಯವು ಜನಸಾಮಾನ್ಯರಿಗೆ ಪರಿಚಯವಾಯಿತು ಮತ್ತು ಅದರ ಮಹತ್ವ ಹೆಚ್ಚಿತು ಎಂದು ತಿಳಿಸಿದರು.

ಬಸವಣ್ಣನವರ ಕಾಲಘಟ್ಟದಲ್ಲಿ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯದ ಸಂಗ್ರಹಕ್ಕಾಗಿ ಮಠಗಳು ಮತ್ತು ಶರಣರ ಮನೆಗಳಿಗೆ ಭೇಟಿ ನೀಡಿ ವಚನಗಳ ತಾಡೋಲೆಗಳನ್ನು ಸಂಗ್ರಹಿಸಿದರು. ಅವುಗಳನ್ನು ಮುದ್ರಿಸಿ ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಹಳಗಟ್ಟಿ ಅವರಿಗೆ ಸಲ್ಲುತ್ತದೆ ಎಂದರು.

ಶರಣರ ವಚನ ಸಾಹಿತ್ಯ ಮುದ್ರಣ ಮಾಡಲು ತಮ್ಮ ಮನೆ, ಹೊಲಗಳನ್ನು ಸಹ ಮಾರಾಟ ಮಾಡಿ ಮುದ್ರಣಾಲಯ ಆರಂಭಿಸಿದರು. ವಚನ ಸಾಹಿತ್ಯವನ್ನು ಮುದ್ರಿಸಿ ಇಡೀ ನಾಡಿಗೆ ವಚನಗಳನ್ನು ಪರಿಚಯಿಸಿದರು ಎಂದರುಯ

ಶಿರಸ್ತೇದಾರ್ ಪ್ರಭಾಗರನ್, ಹುಚ್ಚರಾಯಪ್ಪ, ಮಹೇಶ್, ಸಿಬ್ಬಂದಿ ಗೋಕುಲ್, ಗಾಯಿತ್ರಿ ಅಕ್ಯಮ್ಮ, ಅಂಜಲಿ, ಬಾಲ ಸುಬ್ರಮಣಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.