ಬುಧವಾರ, ಏಪ್ರಿಲ್ 14, 2021
24 °C

ಶ್ರವಣ ದೋಷ ಮನುಷ್ಯನಿಗೆ ಶಾಪವಲ್ಲ: ಡಾ.ಜಿ.ಪ್ರದೀಪ್‌ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಶ್ರವಣ ದೋಷವು ಮನುಷ್ಯನಿಗೆ ಶಾಪವಲ್ಲ. ಕಿವಿಯಲ್ಲೇ ಏನೇ ಸಮಸ್ಯೆ ಕಾಣಿಸಿಕೊಂಡಾಗ ಶೀಘ್ರವೇ ಚಿಕಿತ್ಸೆ ಪಡೆದರೆ ದೋಷ ನಿವಾರಣೆ ಮಾಡಬಹುದು’ ಎಂದು ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಉಪ ಕುಲಪತಿ ಡಾ.ಜಿ.ಪ್ರದೀಪ್‌ಕುಮಾರ್ ಹೇಳಿದರು.

ನಗರದ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಶ್ರವಣ ವಿಭಾಗವು ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಪ್ರತಿ 10 ಮಂದಿಯಲ್ಲಿ ಒಬ್ಬರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ’ ಎಂದರು.

‘ಶ್ರವಣ ದೋಷ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರ ಅನೇಕ ಜಾರಿಗೊಳಿಸುತ್ತಿದೆ. ಕಿವಿ ನೋವು ಕಾಣಿಸಿಕೊಂಡಾಗ ಗ್ರಾಮೀಣ ಭಾಗದ ಜನರು ಸೂಕ್ಷ್ಮ ವಸ್ತುಗಳಿಂದ ಕಿವಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಇದರಿಂದ ಸಮಸ್ಯೆ ಪರಿಹಾರವಾಗುವ ಬದಲು ಗಂಭೀರವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಬಾಲ್ಯಾವಸ್ಥೆಯಲ್ಲಿ ಕಿವಿ ತಪಾಸಣೆ ಮಾಡಿಸಿಕೊಂಡರೆ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹದು. ವಯಸ್ಸು ಹೆಚ್ಚಾದಂತೆ ದೃಷಿ ದೋಷ, ಶ್ರವಣ ದೋಷ ಬರುತ್ತದೆ. ಇದಕ್ಕೆ ಚಿಕಿತ್ಸೆಯೇ ಪರಿಹಾರ’ ಎಂದು ಸಲಹೆ ನೀಡಿದರು.

‘ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಮಾರ್ಚ್ 3ರ ದಿನವನ್ನು ವಿಶ್ವ ಶ್ರವಣ ದಿನವಾಗಿ ಆಚರಿಸುತ್ತದೆ. ಜನರಿಗೆ ಕೇಳುವಿಕೆ ಮತ್ತು ಕೇಳುವಿಕೆಯನ್ನು ಸಂರಕ್ಷಿಸುವ ಬಗ್ಗೆ ಮಾಹಿತಿ ನೀಡುವುದು ಈ ದಿನಾಚರಣೆಯ ಮೂಲ ಉದ್ದೇಶ. ಕಿವುಡುತನ ಮತ್ತು ಅಸರಿಂದ ಉಂಟಾಗುವ ಅಂಗವೈಕಲ್ಯವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಬೇಕು’ ಎಂದು ಸಂಸ್ಥೆಯ ವಾಕ್ ಮತ್ತು ಶ್ರವಣ ವಿಭಾಗದ ಮುಖ್ಯಸ್ಥ ಡಾ.ಜಯರಾಮ್‌ ಕಿವಿಮಾತು ಹೇಳಿದರು.

ಶ್ರವಣ ದಿನಾಚರಣೆ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿ ಪುರಸ್ಕರಿಸಲಾಯಿತು. ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕುಲಸಚಿವ ಡಾ.ಕೆ.ಎನ್.ವಿ.ಪ್ರಸಾದ್, ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಎಸ್‌.ಎಂ.ಅಜೀಂ ಮೋಹಿಯುದ್ದೀನ್ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.